ಆಲಾಪ್ ಸಂಗೀತ ಕಲಾ ಟ್ರಸ್ಟ್ ಆಯೋಜನೆ: ಜನಮನ‌ರಂಜಿಸಿದ ದನಕಾಯುವರ ದೊಡ್ಡಾಟ, ಜಾನಪದ ಹಾಡುಗಳು

ಬಳ್ಳಾರಿ: ನಗರದ ಆಲಾಪ ಸಂಗೀತ ಕಲಾ ಟ್ರಸ್ಟ್ ಸಂಸ್ಥೆ ಹೊಸ ವರ್ಷದ ಅಂಗವಾಗಿ
ಹಮ್ಮಿಕೊಂಡಿದ್ದ ಜಾನಪದ ಗೀತೆಗಳ ಗಾಯನ ಹಾಗೂ ಹಾಸ್ಯ ನಾಟಕ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮವನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚೆನ್ನಪ್ಪ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಕಸಪಾದ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರ ರಾವ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್ಲು, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ, ಶ್ರೀ ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ ನಾಟಕದ ನಿರ್ದೇಶಕ ಪುರುಷೋತ್ತಮ ಹಂದ್ಯಾಳು, ಆಲಾಪ ಸಂಗೀತ ಕಲಾ ಟ್ರಸ್ಟಿನ ಅಧ್ಯಕ್ಷ ರಮಣಪ್ಪ ಬಜಂತ್ರಿ, ಕಾರ್ಯದರ್ಶಿ ಕೆ.ಸುರೇಶ ವೇದಿಕೆಯಲ್ಲಿದ್ದರು.
ಸನ್ಮಾನ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದ ರಮೇಶಗೌಡ ಪಾಟೀಲ್, ಮೆಟ್ರಿಯ ಚನ್ನದಾಸರ ಸಣ್ಣ ದುರ್ಗಪ್ಪ ಹಾಗೂ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಗುರು ಕೆ.ಜಿ.ಆಂಜನೇಯಲು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಜಡೇಶ್ ಎಮ್ಮಿಗನೂರು ಮತ್ತು ತಂಡ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

ಇದೇ ಸಂದರ್ಭದಲ್ಲಿ
ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ನಿರ್ದೇಶಿಸಿದ ಹಾಸ್ಯ ನಾಟಕ ‘ದನ ಕಾಯುವವರ ದೊಡ್ಡಾಟ’ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಪಾತ್ರ ಪರಿಚಯ: ಊರಿನ ಗೌಡನ ಪಾತ್ರದಲ್ಲಿ ರಮೇಶ್ ಗೌಡ ಪಾಟೀಲ್ , ಸಾರಥಿಯಾಗಿ ಪುರುಷೋತ್ತಮ ಹಂದ್ಯಾಳ್, ಗಣೇಶ- ಚಂದ್ರಶೇಖರಾಚಾರ್, ದುಶ್ಯಾಸನ- ಪಾರ್ವತೀಶ್ ಗೆಣಿಕೆಹಾಳ್, ದುರ್ಯೋಧನ ಅಂಬರೀಶ್ , ದ್ರೌಪದಿಯಾಗಿ ಮೌನೇಶ ಕಲ್ಲಳ್ಳಿ, ಕುಡುಕನ ಪಾತ್ರದಲ್ಲಿ- ಎಂ. ಅಹಿರಾಜಗ, ಶಾಲೆಯ ಮಾಸ್ತರ್ ಪಾತ್ರದಲ್ಲಿ – ಜಡೇಶ್ ಎಮ್ಮಿಗನೂರು, ಭೀಮ ನ ಪಾತ್ರದಲ್ಲಿ- ವಿ. ರಾಮಚಂದ್ರ, ನಕುಲನಾಗಿ -ಹನುಮಂತಪ್ಪ, ಸಹದೇವನಾಗಿ- ಸೂರಜ್, ಕೃಷ್ಣನ ಪಾತ್ರದಲ್ಲಿ ಎ.ಎರಿಸ್ವಾಮಿ, ಸಂಚಾಲಕನಾಗಿ- ಎಚ್ ಜಿ ಸುಂಕಪ್ಪ, ಅಗಸನ ಪಾತ್ರದಲ್ಲಿ ಲೇಪಾಕ್ಷಿಗೌಡ ಕಪ್ಪಗಲ್ ಅಭಿನಯಿಸಿದರು.
ಮೃದಂಗ ವೀರೇಶ್ ಶಿಡಿಗಿನಮೊಳ , ರಿದಂ ಪ್ಯಾಡ್ ಪಂಪಾಪತಿ, ಕ್ಯಾಸಿಯೋ ವೆಂಕಟೇಶ ಸಾಥ್ ನೀಡಿದರು.
*****