ಹೊಸಪೇಟೆ(ವಿಜಯನಗರ ಜಿಲ್ಲೆ): ಹಲವು ದಿನಗಳಿಂದ ನಗರದಲ್ಲಿ ಅನಾಥವಾಗಿ, ಅನಾರೋಗ್ಯ ಸ್ಥಿತಿಯಲ್ಲಿ ಅಲೆಯುತ್ತಿದ್ದ ಮಹಿಳೆಯನ್ನು ಇಲ್ಲಿನ ವೈ.ಎಸ್.ಎಸ್ ಮತ್ತು ಶಂಕರ್ ಗೆಳೆಯರ ಬಳಗ ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಅನಾಥೆ ಉರಕುಂದಮ್ಮ (70) ಎನ್ನುವ ಮಹಿಳೆ ಹಲವಾರು ದಿನಗಳಿಂದ ಒಂಟಿಯಾಗಿ ಯಾರ ಶುಶ್ರೂಷೆ ಇಲ್ಲದೆ ನಗರದಲ್ಲಿ ತಿರುಗಾಡುತ್ತಿದ್ದನ್ನು ಕಂಡ ಬಳಗ, ಮಹಿಳೆಯನ್ನು ಯಾರು ನೋಡಿಕೊಳ್ಳದ ಕಾರಣ ತಕ್ಷಣ ನಗರದ ನೂರು ಹಾಸಿಗೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕ ಬಳಿಕ ಉರುಕುಂದಮ್ಮ ಚೇತರಿಸಿ ಕೊಂಡಿದ್ದಾರೆ. ಬಳಗದ ಸದಸ್ಯರು ಮಹಿಳೆಯನ್ನು ವಿಚಾರಿಸಿದಾಗ ಅಘಾತಕರ ವಿಷಯ ಬೆಳಕಿಗೆ ಬಂದಿದೆ. ಸರಕಾರಿ ನೌಕರಿಯಲ್ಲಿದ್ದ ಪತಿ ನಿಧನರಾದ ಬಳಿಕ ಉರುಕುಂದಮ್ಮನ ನಿರ್ದಯಿ ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ. ತಂದೆಯ ಪೆನ್ಷನ್ ಬರುತ್ತಿದ್ದ ಸಮಯ ನೋಡಿಕೊಂಡು ಹಣ ಪಡೆದು ಮತ್ತೇ ‘ ಹೆತ್ತ ತಾಯಿ’ ಯನ್ನೇ ಬೀದಿಗೆ ತಳ್ಳುತ್ತಿದ್ದರು ಎಂದು ತಿಳಿದು ಬಂದಿದೆ..
ಶಂಕರ್ ಅವರು ವೈ ಎಸ್ ಎಸ್ ನ ಶ್ರೀಧರ ನಾಯ್ಡು ಅವರ ಗಮನಕ್ಕೆ ತಂದಾಗ ತಕ್ಷಣ ಕಾರ್ಯಪ್ರವೃತ್ತರಾದ ಬಳಗದ ಡಾ. ಸೋಮಶೇಖರ್,ಮೈನು ಎಲ್.ಎಲ್.ಬಿ ತನ್ವೀರ್ , ಬಾಬಾ ಫರೀದ್ , ಸಲ್ಲು, ಫರ್ಡಿನ್ , ಆರ್.ಜಿ ಯರಿಸ್ವಾಮಿ , ನೂರುಲ್ ಹಸನ್,ಬಿಲಾಲ್,ಕೆ. ಲಿಂಗಪ್ಪ , ಜಿಲಾನ್,ಕಾರ್ತಿಕ್, ಭಾಸ್ಕರ್, ಡ್ರೈವರ್ ಶಿವುಕುಮಾರ, ಅಮನ್ ಅವರು ಉರುಕುಂದಮ್ಮಳಿಗೆ ಚಿಕಿತ್ಸೆ ಕೊಡಿಸಿ ಕೊಪ್ಪಳದ ಹೂವಿನಾಳ್ ರಸ್ತೆಯಲ್ಲಿರುವ ಸುರಭಿ ವೃಧಾಶ್ರಮಕ್ಕೆ ಸೇರಿಸಿದ್ದಾರೆ.
ಶ್ರೀಧರ ನಾಯ್ಡು, ಶಂಕರ್ ಅವರ ಗೆಳೆಯರ ಬಳಗದ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(ಸಚಿತ್ರ ವರದಿ: ಪ್ರಫುಲ್ ಪಾಟೀಲ್, ಹೊಸಪೇಟೆ)
*****