ಎಚ್ಚರ ವಹಿಸೋಣ
ಮಾಸ್ಕನು ಧರಿಸೋಣ
ಎಲ್ಲಾ ಎಚ್ಚರ ವಹಿಸೋಣ
ಜೀವವ ಉಳಿಸೋಣ
ಎಲ್ಲರ ಜೀವನ ಉಳಿಸೋಣ
ಬೆನ್ನು ಹತ್ತಲು ಭೂತದಂತೆ
ಕುಳಿತಿದೆ ಹೊರಗೆಲ್ಲೋ
ಕಾದು ಕುಳಿತಿದೆ ಹೊರಗೆಲ್ಲೋ
ಬೇಡವೆಂದರು ಹುಡುಕಿ ಹೋಗಿ
ಒಳಗೇ ತರುತಿಯಲ್ಲೋ
ನೀನೇ ಒಳಗೇ ತರುತಿಯಲ್ಲೊ
ಬಡವ ಬಲ್ಲಿದ ಎನ್ನುವಂತ
ಭೇದವು ಅದಕ್ಕಿಲ್ಲ
ಯಾವ ಬೇಧವು ಅದಕ್ಕಿಲ್ಲ
ಹತ್ತಿರಬಂದ ಯಾರನು ಬಿಡದು
ಸನಿಹವು ಸರಿಯಲ್ಲ
ತುಂಬಾ ಸನಿಹವು ಥರವಲ್ಲ.
ದೇಶದ ಒಳಿತಿಗೆ
ಲಸಿಕೆಯ ಪಡೆಯದೆ
ಬೇರೆ ವಿಧಿಯಿಲ್ಲ ನಮಗೆ ಬೇರೆ ವಿಧಿಯಿಲ್ಲ
ದೇಶವನುಳಿಸಲು
ದೇಶಸೇವೆಯು
ಇದುವೇ ನಮಗೆಲ್ಲ ಸುಮ್ಮನೆ ಬರದಿರಿ ಹೊರಗೆಲ್ಲ
ದುರಾಸೆಯ ತಿಪ್ಪೆಗೆ
ಬೇಲಿಯ ಹಾಕಿ
ಎಚ್ಚರವಹಿಸೋಣ ಇನ್ನು ಎಚ್ಚರವಹಿಸೋಣ
ಹುಟ್ಟುವ ಕೂಸಿಗೆ
ಕೊಟ್ಟಿಗೆ ಮಾಡದೆ
ಶುಚಿಯಾಗಿರಿಸೋಣ ಭೂಮಿಯ ಶುಚಿಯಾಗಿರಿಸೋಣ
-ಮನು ಪುರ, ತುಮಕೂರು
*****