ಅನುದಿನ ಕವನ-೩೮೫, ಕವಯತ್ರಿ: ರಜನಿ ಕಾಂಬ್ಳೆ, ಬೆಳಗಾವಿ, ಕವನದ ಶೀರ್ಷಿಕೆ:ಮತ್ತೆ ಮಗುವಾಗಬೇಕಿದೆ ನಾನು!

ಮತ್ತೆ ಮಗುವಾಗಬೇಕಿದೆ ನಾನು!

ಮತ್ತೆ ಮಗುವಾಗಬೇಕಿದೆ ನಾನು!
ಅಮ್ಮನ ಮಡಿಲಲ್ಲಿ ಮಲಗಿ
ಕಿಲಕಿಲ ನಲಿವ ನಗುವಾಗಬೇಕಿದೆ!
ಅಪ್ಪನ ಹೆಗಲಲ್ಲಿ ಕುಳಿತು
ಕಣ್ಣಗಲಿಸಿ ನೋಡುವ ಜಗವಾಗಬೇಕಿದೆ…!

ಮತ್ತೆ ಮಗುವಾಗಬೇಕಿದೆ ನಾನು!
ಗೆಳೆಯರ ಜೊತೆಗೂಡಿ ಕುಣಿಯುತ
ಬಂಡಿಯಾಟಡಿ ಜೊತೆಯಾಗಬೇಕಿದೆ!
ಮಾಮರದಡಿ ನಿಂತು ಹಾಡುವ
ಕೋಗಿಲೆ ದನಿಯೊಂದಿಗೆ ಕೊರಳಗಬೇಕಿದೆ…!

ಮತ್ತೆ ಮಗುವಾಗಬೇಕಿದೆ ನಾನು!
ಬಾನಲಿ ಮೂಡಿದ ಕಾಮನಬಿಲ್ಲನು
ಹಾರುತ ತೀಡುವ ಬೆರಳಾಗಬೇಕಿದೆ!
ಮರಳಲಿ ಗೂಡನು ಕಟ್ಟುತ
ಖುಷಿಯಲಿ ಕುಪ್ಪಳಿಸಿ ಊರುಳಾಡಬೇಕಿದೆ…!

ಮತ್ತೆ ಮಗುವಾಗಬೇಕಿದೆ ನಾನು!
ಕಪಟ, ದ್ವೇಷ, ದುಳ್ಳರಿಗಲಿಲ್ಲದ
ಸಕಲರ ಪ್ರೀತಿಯ ಮುಗ್ಧಮನವಗಬೇಕಿದೆ!
ಹಣ, ಅಧಿಕಾರ, ಮೋಹಗಳಿಲ್ಲದ
ಸಂಸಾರ ಸಂಬಳ ಚಿಂತೆಗಳಿಲ್ಲದ
ನಲಿದು ಕುಣಿದು ಆಡುವ ಕಂದಾನಗಬೇಕಿದೆ…!

 

-ರಜನಿ ಕಾಂಬ್ಳೆ, ಬೆಳಗಾವಿ
****”