ಅನುದಿನ ಕವನ-೩೮೮, ಕವಿ: ಶಂಕುಸುತ ಮಹಾದೇವ, ರಾಯಚೂರು. ಕವನದ ಶೀರ್ಷಿಕೆ: ಮುದ್ದಿನಾ ಮಗಳು

ಮುದ್ದಿನಾ ಮಗಳು

ಮುದ್ದಿನಾ ಮಗಳು
ಜೊತೆಯಲ್ಲಿ ಇರುವಳು
ಕಣ್ಣೀರೊರಸಿ ಸಾಗುವಳು
ಪ್ರೀತಿಯನ್ನು ಉಣಿಸುವಳು.

ಮುದ್ದಿನಾ ಮಗಳು
ನೋವ ಮರೆಸುವಳು
ಖುಷಿಯ ಕೊಡುವಳು
ಹೂನಗೆ ಸೂಸಿ ಸೆಳೆವಳು.

ಮುದ್ದಿನಾ ಮಗಳು
ಮುತ್ತುಗಳನ್ನಿಡುವಳು
ಕೈತ್ತುತ್ತು ಉಣಿಸುವಳು
ಅಂಬೆಗಾಲಿಟ್ಟು ನಡೆವಳು.

ಮುದ್ದಿನಾ ಮಗಳು
ಮನೆಯ ಬೆಳಗುವಳು
ಮನೆತನ ಕಾಯುವಳು
ಮನ ಮೆಚ್ಚಿಸಿ ನಲಿವಳು.

ಮುದ್ದಿನಾ ಮಗಳು
ತಾಯಿಯಾಗಿ ಬಂದಳು
ತುಂಟತನದಿ ಕಾಡುವಳು
ಬೇಸರವನ್ನೆಲ್ಲಾ ಕಳೆವಳು.

ಮುದ್ದಿನಾ ಮಗಳು
ಶಶಿಯಂತೆ ಹೊಳೆವಳು
ಮನದ ಕತ್ತಲು ನೀಗುವಳು
ಮನಕೆ ನೆಮ್ಮದಿ ನೀಡುವಳು.

✍️ ಶಂಕುಸುತ ಮಹಾದೇವ, ರಾಯಚೂರು
*****