ಭಾವೈಕ್ಯತೆ
ಭಾವ – ಭಾವಗಳಲ್ಲಿ
ಜೀವ – ಜೀವಗಳಲ್ಲಿ
ಬದುಕಿನರ್ಥವ ತಿಳಿದು, ಅರ್ಥೈಸಿ
ಬಾಳುವುದೇ ಭಾವೈಕ್ಯತೆ !!
ಜಾತಿ – ಬೇಧವ ಮರೆತು
ದ್ವೇಷ – ಅಸೂಯೆಯ ತೊರೆದು
ಎಲ್ಲ ಜಾತಿಯು ಒಂದೇ ಎಂಬ
ಭಾವನೆಯೇ ಭಾವೈಕ್ಯತೆ !!
ಮಂದಿರ ಬೇರೆ, ಮಸೀದಿಯೆ ಬೇರೆ
ಎಂದು ಭೇದ ಮಾಡದೇ
ದೇವನೊಬ್ಬ ನಾಮ ಹಲವು
ಎಂಬರಿಯುವುದೇ ಭಾವೈಕ್ಯತೆ !!
ಎಲ್ಲ ನದಿಗಳೂ ಬಿನ್ನ – ಬಿನ್ನ
ನಾಮ ರೂಪದಿಂದಿರಲು
ಸಾಗರವ ಸೇರಿ
ಒಂದಾಗುವುದೇ ಭಾವೈಕ್ಯತೆ !!
ಸರ್ವಧರ್ಮವೂ ಶ್ರೇಷ್ಠವೆಂದು ನಂಬಿ
ಸಹಬಾಳ್ವೆಯಿಂದೊಡಗೂಡಿ
ಸಾಮರಸ್ಯದಿ
ಬದುಕುವುದೇ ಭಾವೈಕ್ಯತೆ !!
ನಾನು ನನ್ನದು ಎಂದು
ಅತಿಯಾಗಿ ಆಸೆಪಡದೆ
ಎಲ್ಲವೂ ಆ ದೇವನದು ಎಂದು
ಪರಮಾತ್ಮನಲ್ಲಿ ಬೆರೆತು ಹೋಗುವುದೇ
ನಿಜವಾದ ಭಾವೈಕ್ಯತೆ !!
-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****