ಸಮಯ ಓಡುತ್ತಲಿದೆ….
ಸಮಯ ಓಡುತ್ತಲಿದೆ
ತನ್ನ ಕಾರ್ಯ ನಡೆಸುತ್ತಿದೆ
ಬೀಗ ಬಿದ್ದಿದ್ದು “ಓಘ” ಕ್ಕೆ
ಧಾವಂತಕ್ಕೊಂದು ನೀರವತೆ …
ಪ್ರೀತಿಸಿದವರ ನೋಯಿಸಿದಂತಲ್ಲ
ಪ್ರಕೃತಿಯ ನೋಯಿಸುವುದು
ಸಂಪೂರ್ಣ ಮನುಜ ಕುಲವನ್ನೇ
ಅಲ್ಲಾಡಿಸುವುದು …
ನಾವು ಮಾಡಿದ್ದೆಲ್ಲ ನಮ್ಮ
ಬೆನ್ನ ಹಿಂದಿದೆ, ಬದುಕಿನ
ಪಾಠ ಕಲಿಯಬೇಕಿದೆ, ಮನಸು
ತಿಳಿಯಾಗಬೇಕಿದೆ …
ಮರೆತ ಮೌಲ್ಯಗಳ
ನೆನಪಿಸಿಕೊಳ್ಳಬೇಕಿದೆ …
-ಡಾ. ವಾಣಿ ಸಂದೀಪ್, ಲಂಡನ್ ಕನ್ನಡತಿ