ಅನುದಿನ‌ ಕವನ-೪೦೬, ಕವಿ: ವೀರಪ್ಪ ತಾಳದವರ, ಯಾವಗಲ್, ಕವನದ ಶೀರ್ಷಿಕೆ: ನಾವು ಭಾರತೀಯರು

ನಾವು ಭಾರತೀಯರು

ನಾವು ಭಾರತೀಯರು

ಒಂದೇ ತಾಯಿ ಮಕ್ಕಳು!
ನಾವು ಭಾರತೀಯರು
ಈ ನೆಲದ ವಾರಸುದಾರರು!!

ಹಿಂದೂ ಮುಸ್ಲಿಂ ಕ್ರೈಸ್ತರು
ಒಂದೇ ಬಳ್ಳಿಯ ಹೂಗಳು !
ಜೈನ ಬುದ್ಧ ಸಿಖ್ಖರು
ಒಂದೇ ಕರುಳ ಕುಡಿಗಳು!!

ಬಗೆ ಬಗೆಯ ಭಾಷೆಯ ಸೀಮೆ
ನಮ್ಮಯ ನೆಲದ ಹಿರಿಮೆ!
ವಿವಿಧ ನಾಡು ನೋಡೆ
ನಮ್ಮಯ ತಾಯಿಯ ಬೀಡೆ!!

ದ್ವೇಷದ ಕಿಡಿಯ ಅಳಿಸಿ
ಪ್ರೀತಿಯ ಭಾವವ ಬೆಳೆಸಿ!
ಕಟ್ಟೋಣ ಶಾಂತಿಯ ನಾಡು
ಸುಂದರ ವನದ ಗೂಡು!!

ನಾವು ಭಾರತೀಯರು
ಒಂದೇ ತಾಯಿಯ ಮಕ್ಕಳು!
ನಾವು ಭಾರತೀಯರು
ಈ ನೆಲದ ವಾರಸುದಾರರು!!

 

-ವೀರಪ್ಪ ತಾಳದವರ, ಯಾವಗಲ್
*****