ಅನುದಿನ‌ ಕವನ-೪೦೯, ಕವಿ: ದೇವರಾಜ್ ಹುಣಸಿಕಟ್ಟಿ, ರಾಣೆಬೆನ್ನೂರು ಕಾವ್ಯ ಪ್ರಕಾರ: ಗಜಲ್

ಗಜಲ್

ನಾನು ಕುಡಿಯುತ್ತೇನೆ ದುಃಖ ಮರೆಯಲೆಂದು ಭಾವಿಸಬೇಡಿ
ಹಗಲಿರುಳು ಅವಳ ನೆನಪಲ್ಲೇ ಸುಖಿಸಲೆಂದು ಮರೆಯಬೇಡಿ

ಬಾಹುಬಂಧನ ಕಳಚಿದೊಡನೆ ದೂರವಾದೆವೆಂದರೆ ಪ್ರೀತಿ ಹೇಗಾದೀತು..?
ಸದಾ ಬಂಧನ ಬರೀ ಬೇಡಿಗಳೆಂದು ತಿಳಿಯಬೇಡಿ

ಏನೂ ಬದಲಿಲ್ಲ ಎಂದಿನಂತೆ ಉರಿಳಿವೆ ಸೊಗದಿರುಳು ಗೆಳೆಯ
ಬರೀ ನಿದ್ದೆ ಕಳೆದುಕೊಂಡ ಕಂಗಳ ಕಂಬನಿ ಎದೆಗಿಳಿದವೆಂದು ಅರಿಯದಿರಬೇಡಿ

ನಮ್ಮಗಲಿಕೆಗೆ ಮುಂಜಾನೆ ಮೌನದಲಿ ಇರುಳೇ ರೋಧಿಸಿದ್ದು ದಿಟವಾಯಿತು…!!
ನೆಲವ ತಬ್ಬಿದ ಪ್ರತಿ ಇಬ್ಬನಿಯ ಹನಿ ಸಾಕ್ಷಿಗಳೆಂದು ಅಲ್ಲಗಳೆಯಬೇಡಿ

ನೀನಿಲ್ಲದೆಯೂ ಜಗತ್ತು ನಗುತ್ತೆ ಅರಳುತ್ತೆ ಹೊರಳುತ್ತೆ ಗೊತ್ತೇ ಇರಲಿಲ್ಲ..!
ದೇವ ಇನ್ನೂ ಜೀವಂತವಿರೋದಕ್ಕೆ ಪುರಾವೆಗಳೆಂದು ಹುಡುಕಬೇಡಿ

– ದೇವರಾಜ್ ಹುಣಸಿಕಟ್ಟಿ, ರಾಣೆಬೆನ್ನೂರು
*****