ಪ್ರಾಚಾರ್ಯ ಡಾ. ಬಿ.ಜಿ. ಕನಕೇಶ ಮೂರ್ತಿ ಅವರಿಗೆ ‘ನಮ್ಮ ಬಳ್ಳಾರಿ ರತ್ನ ಪ್ರಶಸ್ತಿ’ ಪ್ರದಾನ

ಹೊಸಪೇಟೆ, ಫೆ. 14: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ, ಸಾಹಿತಿ ಡಾ. ಬಿ ಜಿ ಕನಕೇಶಮೂರ್ತಿ ಅವರಿಗೆ ರಾಜ್ಯ ಮಟ್ಟದ ‘ನಮ್ಮ ಬಳ್ಳಾರಿ ರತ್ನ’ ಪ್ರಶಸ್ತಿ ಲಭಿಸಿದೆ.
ಬಳ್ಳಾರಿಯಲ್ಲಿ ಭಾನುವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಗಣ್ಯರು ಡಾ. ಕನಕೇಶಮೂರ್ತಿ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಬಳ್ಳಾರಿಯ ಶ್ರೀ ಮಹಾದೇವ ಎಜುಕೇಶನ್ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ ‘ಸಂಕ್ರಾಂತಿ ವೈಭವ’ದ ಅಂಗವಾಗಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ‘ ನಮ್ಮ ಬಳ್ಳಾರಿ ರತ್ನ’ ನೀಡಿ ಗೌರವಿಸಿದ್ದು ಶೈಕ್ಷಣಿಕ ಹಾಗೂ ಸಾಹಿತ್ಯಕ್ಕೆ ಅನುಪಮ‌ ಸೇವೆ ಸಲ್ಲಿಸಿರುವ ಡಾ. ಕನಕೇಶ ಮೂರ್ತಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಗತಿಪರ ಮತ್ತು ಸಾವಯುವ ಕೃಷಿ ರೈತ ಸಿಂಧುವಾಳ ಕೇಶವರೆಡ್ಡಿ, ಖ್ಯಾತ ಶಾಸ್ತ್ರೀಯ ನೃತ್ಯ ಗುರು ಶ್ರೀಮತಿ ವನಮಾಲ ಕುಲಕರ್ಣಿ, ಹಿರಿಯ ನ್ಯಾಯವಾದಿ ಶ್ರೀಮತಿ ರಮಾದೇವಿ, ನೇತ್ರ ತಜ್ಞ ಡಾ. ಪರಸಪ್ಪ ಬಂದ್ರಕಳ್ಳಿ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಂದೇ ಮಾತರಂ ಯುವಕ ಸಂಘ, ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಸಹಯೋಗದಲ್ಲಿ ಸಂಕ್ರಾಂತಿ ವೈಭವ-2022 ಎರಡು ದಿನಗಳ ಕಾಲ ಯಶಸ್ವಿಯಾಗಿ ಜರುಗಿತು.
*****