ಅನುದಿನ ಕವನ-೪೧೧, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ನೆನಪುಗಳೇ ಹೀಗೆ….

ನೆನಪುಗಳೇ ಹೀಗೆ….

ನೆನಪುಗಳೇ
ಹಾಗೆ…..
ಖುಷಿಗೆ ಬೀಗುವ
ಬೇಸರಕ್ಕೆ ಬಾಗುವ
ಮಿಶ್ರ ಭಾವನೆ
ಭರವಸೆಗಳೊಂದಿಗೆ
ನಂಬಿಕೆಗಳೊಂದಿಗೆ
ಸಾಗುವ
ಈ ನೆನಪುಗಳೇ
ಹೀಗೆ…..
ಬೆಳಕಿನಲ್ಲಿ ಬೆಳೆಯುತ್ತಾ
ಕತ್ತಲಿನಲ್ಲಿ ಹುಡುಕುತ್ತ
ಜೊತೆ – ಜೊತೆಯಲ್ಲೇ
ಬದುಕಿನೊಂದಿಗೆ
ಬಾಳಿನೊಂದಿಗೆ
ಬರುವ
ಈ ನೆನಪುಗಳೇ
ಹೀಗೆ…..
ಇಷ್ಟ – ಕಷ್ಟಗಳ
ಸಮನಾಗಿ ಸ್ವೀಕರಿಸುತ್ತಾ
ಕಲ್ಪನೆಗೂ ದೂರವಾದ ಕನಸುಗಳನ್ನು
ಹೆಣೆಯುತ್ತಾ
ಬದುಕಿನಲ್ಲಿ ಬದುಕುವ
ಛಲ ಮೂಡಿಸುವ
ಈ ನೆನಪುಗಳೇ
ಹೀಗೆ…..
ಕೆಲವು ನೆನಪುಗಳು
ಕೊನೆಯವರೆಗೂ ಕಾಡುವ
ನೆರಳಿನಂತೆ ಹಿಂಬಾಲಿಸುವ
ಕೆಲವೊಂದು
ದೈನಂದಿನ ದಿನಕ್ಕೆ ಬಾಡುವ
ಈ ನೆನಪುಗಳ
ಜೀವನದ ಪರಿ
ಮೇರು ಗಿರಿ

-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****