ಬಳ್ಳಾರಿ, ಫೆ.16: ಕೊವೀದ್ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ರೈಲುಗಳನ್ನು ಪುನರ್ ಪ್ರಾರಂಭ ಮಾಡುವಂತೆ ರಾಜ್ಯ ರೈಲ್ವೆ ಕ್ರಿಯ ಸಮಿತಿ ಒತ್ತಾಯಿಸಿದೆ.
ಬುಧವಾರ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ನೈರುತ್ಯ ರೈಲ್ವೆ ವಲಯದ ವಿಭಾಗದ ಮ್ಯಾನೇಜರ್ ಅರವಿಂದ ಮಳಕೆಡ್ ಅವರನ್ನು ಭೇಟಿಮಾಡಿದ ಸಮಿತಿ ಅಧ್ಯಕ್ಷ ಕೆ ಎಂ ಮಹೇಶ್ವರಸ್ವಾಮಿ ಅವರ ನೇತೃತ್ವ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಪ್ರಸ್ತುತ ನಿಲ್ಲಿಸಲಾಗಿರುವ ಕೊಲ್ಲಾಪುರ ಹೈದರಾಬಾದ್ ಮನುಗುರು, ಹುಬ್ಬಳ್ಳಿ-ಬಳ್ಳಾರಿ ತಿರುಪತಿ ಇಂಟರ್ಸಿಟಿ, ಗುಂತಕಲ್ ಚಿಕ್ಕ ಜಾಜೂರ್ ರೈಲು, ವಾರದ ರೈಲುಗಳಾದ ವಾಸ್ಕೋ ಚೆನ್ನೈ ಯಶವಂತಪುರ್ ಟಾಟಾನಗರ ರೇಣುಗುಂಟ ಶಿವಮೊಗ್ಗ ರೈಲುಗಳನ್ನು ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಲಾಯಿತು.
ಮೈಸೂರ್ ವಾರಣಾಸಿ ವಾರದಲ್ಲಿ ಎರಡು ದಿನ ಸಂಚರಿಸುವ ರೈಲನ್ನು ಯಾವುದೇ ಕಾರಣಕ್ಕೆ ರದ್ದು ಮಾಡಬಾರದೆಂದು ಒತ್ತಾಯಿಸಿದ ಮಹೇಶ್ವರ ಸ್ವಾಮಿ ಅವರು, ರೈಲನ್ನು ರದ್ದುಮಾಡಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ಹಾಗೂ ಲಿಫ್ಟ್ ಸೌಲಭ್ಯದ ಪ್ರಸ್ತಾವನೆ ಇಲಾಖೆ ಮುಂದಿದ್ದು ಕೂಡಲೇ ಕಾಮಗಾರಿ ಆರಂಭಿಸ ಬೇಕು ಹಾಗೂ
ರೇಡಿಯೋ ಪಾರ್ಕ್ ರೈಲ್ವೆ ಗೆಟ್ ಹತ್ತಿರ ನಿರ್ಮಿಸಲಾದ ಮೇಲ್ಸೇತುವೆ ಕೆಲಸವನ್ನು ಕೂಡಲೇ ಅಂತಿಮಗೊಳಿಸಿ ಜನತೆಗೆ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಲಾಯಿತು.
ನಿಯೋಗದಲ್ಲಿ ರೈತ ಸಂಘದ ದರೂರ್ ಪುರುಷೋತ್ತಮ ಗೌಡ, ಗಂಗಾವತಿ ವೀರೇಶ್, ಹಿರಿಯ ನಾಗರಿಕರಾದ ಟಿಸಿ ಗೌಡ ಡಾ. ನಾಸಿ, ಪಿ. ಬಂಡೆಗೌಡ
ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿ ಮಹೇಶ್ ಗೌಡ ಎಲ್ಐಸಿ ಸಂಘಟನೆಯ ಕೊಟ್ರೇಶ್ ಕೆಎಂ, ವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರಾದ ಕೋಳೂರು ಚಂದ್ರಶೇಖರಗೌಡ, ಗೌರಿಶಂಕರ್ ಮೆಡಿಕಲ್ ಸ್ಟೋರ್ ಸಂಘದ ಉಮೇಶ್, ಪಾರಂಪರಿಕ ವೈದ್ಯ ಬಿ ಎಂ ಶಾಂತಮೂರ್ತಿ, ದೀಪೇಶ್ ಜೈನ್ ಹಾಗೂ ಪೂಲ್ ಚಂದ್ ಫಾರಕ್ ಹಾಗೂ ಕ್ರಿಯಾಸಮಿತಿಯ ಸೂರ್ಯಪ್ರಕಾಶ್ ಅವರು ಪಾಲ್ಗೊಂಡಿದ್ದರು.
*****