ಅನುದಿನ ಕವನ-೪೧೫, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ಜಯ ಜಯ, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನ ಹಳ್ಳಿ

ಜಯ ಜಯ

ಬಾಳಿ ಬದುಕಿದರೆ ಜಯ ಜಯ,
ದಿನವೂ ದಿನಕರನೊಂದಿಗೆ ಎದ್ದರೆ ಜಯ ಜಯ,
ಗೆಳೆಯ ಗೆಳತಿಯರಿದ್ದರೆ ಜಯ ಜಯ,
ದುಡಿದು ತಿಂದರೆ ಜಯ ಜಯ,
ಓದಿ ಬರೆದು ಬೆಳೆದರೆ ಜಯ ಜಯ,
ಮುದ್ದಿನ ನಲ್ಲನೊಡನಿದ್ದರೆ ಜಯ ಜಯ,
ಆತ ಬರ ಸೆಳೆದು ಅಪ್ಪಿಕೊಂಡರೆ ಜಯ ಜಯ,
ಮುತ್ತಿನ ಮಳೆಯಲ್ಲಿ ಮತ್ತೆರಿದರೆ ಜಯ ಜಯ,
ಚಿನ್ನಾಟವಾಡುವ ಚಲುವ ಸಿಕ್ಕರೆ ಜಯ ಜಯ,
ನಲುವಿನ ಒಲವಿನ ಆಟ ಆಡಿದರೆ ಜಯ ಜಯ,
ಸಕಲ ಸಂತಸದಿ ನಲ್ಲನ ತೊಳತೆಕ್ಕೆಯಲ್ಲಿದ್ದರೆ ಜಯ ಜಯ,
ಪ್ರೇಮಿಸಿ ಪ್ರೇಮಿ ಪಕ್ಕವೆ ನಿದ್ದೆ ಗೈದರೆ ಜಯ ಜಯ,
ಜಯಲಕ್ಷ್ಮಿಯೇ ಜೊತೆಗಿದ್ದರೆ ಜಯ ಜಯ.

– ಮನಂ, ಐಪಿಎಸ್, ಬೆಂಗಳೂರು

-ಶಾರದ ಕೊಪ್ಪಳ, ಸಂಗೀತ ಶಿಕ್ಷಕರು, ಹಗರಿಬೊಮ್ಮನಹಳ್ಳಿ