ಕಾವಲು ನಾಯಿಗಳು
ನಾಮಕಾವಸ್ತೆ ಕಾವಲು ನಾಯಿಗಳು,
ಬಿಸ್ಕಿಟು ಹಾಕುವವನ ಮೂಸೋ ನಾಯಿಗಳು,
ಆಟವಾಡಿಸೋನ ಮುಂದೆ ತೆವಳುವ ತೆವಲು ನಾಯಿಗಳು,
ಕಾವಲು ನಾಯಿಗಳು, ಕಾವಲು ನಾಯಿಗಳು.
ಬಾಡಿಗಾಗಿ ಬೊಗಳೊ ನಾಯಿಗಳು,
ಚಿಕ್ಕಪುಟ್ಟ ಹಕ್ಕಿಗಳ ಮುಕ್ಕೊನಾಯಿಗಳು,
ದೊಡ್ಡ ಪ್ರಾಣಿಗಳಿಗೆ ಅಂಜೊನಾಯಿಗಳು,
ಕಾವಲು ನಾಯಿಗಳು, ಕಾವಲು ನಾಯಿಗಳು.
ತಮ್ಮಿಂದಲೆ ಎಲ್ಲಾ ಎಂಬುವ ಜಂಬದ ನಾಯಿಗಳು,
ಉಂಬಳಕ್ಕಾಗಿ ನಿಂತ ಬೀದಿ ನಾಯಿಗಳು,
ಕಚ್ಚಾಟ ಕೆಚ್ಚಾಟ ಜೀವನವಾದ ನಾಯಿಗಳು,
ಕಾವಲು ನಾಯಿಗಳು, ಕಾವಲು ನಾಯಿಗಳು.
ಎಂಜಲು ತಿನ್ನಲು ಹಲ್ಲುಗಿಂಜುವ ನಾಯಿಗಳು,
ಬಾಡಿಗಾಗಿ ತೊಡೆಗಾಗಿ ಜೊಲ್ಲು ಸುರಿಸುವ ನಾಯಿಗಳು,
ಹೆಣ್ಣುನಾಯಿಗಾಗಿ ಬೀದಿ ಬೀದಿ ಅಲೆವ ಜಾತಿ ನಾಯಿಗಳು,
ಕಾವಲು ನಾಯಿಗಳು, ಕಾವಲು ನಾಯಿಗಳು.
– ಮನಂ, ಐಪಿಎಸ್, ಬೆಂಗಳೂರು
*****