ಬೆಟ್ಟ ಕಲಿಸುವ ಪಾಠ!!
ಯಾವುದೇ ಬೆಟ್ಟ ನೋಡಿ ಅದಕ್ಕೆ ದಾರಿಗಳು ಸರಳ ರೇಖೆ ಎಳೆದಂತೆ ನೇರವಾಗಿಲ್ಲ. ಎಲ್ಲವೂ ಹೀಗೆ ಅತ್ತ’ಇತ್ತ ಹೋಗಿ ಮೇಲೆ ಏರಿ ಕೆಳಗೆ ಇಳಿದು ಅಂತಿಮ ಗುರಿಯ ತಾಣವನ್ನು ಮುಟ್ಟಿರುತ್ತವೆ.
ಬೆಟ್ಟಗಳ ದಾರಿ ಹೀಗಿದ್ದರೆ ಮಾತ್ರ ಏರಲು ಸಾಧ್ಯ, ನೇರ, ಕಡಿದಾದ ಮಾರ್ಗ ಅಪಾಯಕ್ಕೆ ಆಹ್ವಾನ ನೀಡುವುದು ಮಾತ್ರವಲ್ಲ, ಮುಟ್ಟಬೇಕಾದ ಗುರಿಯನ್ನು ಅಸಾಧ್ಯವಾಗಿಸುತ್ತದೆ.
ನಮ್ಮ ಬದುಕು ಕೂಡ ಬೆಟ್ಟದ ಮಾರ್ಗಕ್ಕೆ ಭಿನ್ನವಾಗಿಲ್ಲ. ಯಾವುದೇ ಗುರಿ ಸರಳ ರೇಖೆಯಂತೆ ಸುಲಭವಾಗಿ ಮುಟ್ಟುವಂತಿರುವುದಿಲ್ಲ. ಹಾಗೆ ಮುಟ್ಟಿದರೆ ಅದು ದೊಡ್ಡ ಗುರಿಯೇ ಅಲ್ಲ!! ಬದುಕೆಂಬ ರಸ್ತೆ ಮಾರ್ಗದಲ್ಲಿ ಅತ್ತ’ಇತ್ತ, ಮೇಲೆಕೆಳಗೆ, ಏಳುಬೀಳು ಕಾಣುತ್ತಾ ಹೋಗಬೇಕಾದದ್ದು ಪ್ರಕೃತಿ ನಿಯಮವೇ ಸರಿ ಎನ್ನಬಹುದು.
– ಸಂಜಯ್ ಹೊಯ್ಸಳ, ಮೈಸೂರು