ಹೆಣ್ಣು ಸಮಾಜದ ಕಣ್ಣು -ನ್ಯಾಯಾಧೀಶೆ ಎನ್.ವಿ.ಭವಾನಿ ಶ್ಲಾಘನೆ

ಬಳ್ಳಾರಿ, ಮಾ.8: ಹೆಣ್ಣು ಸಮಾಜದ ಕಣ್ಣು ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾದ ಎನ್.ವಿ.ಭವಾನಿ ಹೇಳಿದರು.
ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
.ಮಹಿಳಾ ದಿನಾಚರಣೆಯನ್ನು ಈ ಬಾರಿ ‘ಸುಸ್ಥಿರ ನಾಳೆಗಾಗಿ ಸಮಾನತೆ’ ಎನ್ನುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಹೆಣ್ಣು ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿಯಾಗಿದ್ದಾಳೆ. ಕಷ್ಟದ ದಿನಗಳನ್ನು ಎದುರಿಸಿ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ ಮಹಿಳೆಯ ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ ಎಂದು ಶ್ಲಾಘಿಸಿದರು.
ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲಾ ಪಾತ್ರಗಳನ್ನು ತುಂಬುವ ಆಕೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನ ಮೀಸಲಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ವಿ.ಸಂಘದ ಅಧ್ಯಕ್ಷ ಗುರುಸಿದ್ದ ಸ್ವಾಮಿ ಮಾತನಾಡಿ, ಬಡ, ದುರ್ಬಲ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.


ಶ್ರೀ ಮಹಾದೇವ ತಾತ ಕಲಾ ಸಂಘ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ ಅವರು, ಪ್ರಸಿದ್ಧ ರಂಗಬಕಲಾವಿದೆ ನಾಡೋಜ ದಿ. ಸುಭದ್ರಮ್ಮ ಮನ್ಸೂರ ಅವರ ಕಲೆ- ಸಾಧನೆ- ಬದುಕು- ಬವಣೆ ಬಗ್ಗೆ ಬೆಳಕು ಚೆಲ್ಲಿದರು.
ಅಧ್ಯಾಪಕಿ ಡಾ.ಎ.ಎಂ.ಸಿದ್ದೇಶ್ವರಿ ಅವರು, ಸುಭದ್ರಮ್ಮ ಮನ್ಸೂರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾದ
ಎನ್.ವಿ.ಭವಾನಿ,
ಅಧ್ಯಾಪಕಿ ಡಾ. ಎ.ಎನ್.ಸಿದ್ದೇಶ್ವರಿ, ರಂಗನಟಿ ಜಯಶ್ರೀ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿ ಸಂಘದ ಕಾರ್ಯದರ್ಶಿ ಬಿ.ವಿ.ಬಸವರಾಜ, ಖಜಾಂಚಿ ಗೋನಾಳ ರಾಜಶೇಖರ ಗೌಡ, ಹಾನಗಲ್ ಪಾಲಿಟೆಕ್ನಿಕ್ ಕಾಲೇಜು ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ಹಲಕುಂದಿ ವಿಜಯಕುಮಾರ್, ಎ ವೀರನಗೌಡ, ಸಂಗನಕಲ್ಲು ಚಂದ್ರಶೇಖರ, ಉಪ ಪ್ರಾಚಾರ್ಯೆ ಗೌಸಿಯಾಬೇಗಂ ಸೇರಿ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳಿದ್ದರು.
ಪ್ರಾಚಾರ್ಯ ಡಾ.ಟಿ.ಎಂ.ವೀರಗಂಗಾಧರ ಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕರಾದ ನಳಿನಿ ಹಾಗೂ ರಮ್ಯ ಶ್ರೀ ಅವರು ನಿರೂಪಿಸಿದರು.
ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜು ಅಧ್ಯಕ್ಷ ಹೆಚ್.ಎಂ.ಕಿರಣಕುಮಾರ್ ವಂದಿಸಿದರು.
*****