ಅನುದಿನ‌ಕವನ-೪೩೪, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಾಕಾರ: ಹಾಯ್ಕುಗಳು

ಹಾಯ್ಕುಗಳು


ಹೆಜ್ಜೆ ಮೂಡದ
ನನ್ನೆದೆಯಲಿ; ನಿನ್ನ
ಗೆಜ್ಜೆ ನಿನಾದ

ಹೃದಯಕದ್ದ
ಆರೋಪಿ ನೀ ; ಅದಕೆ
ನಾನೇ ಸಾಕ್ಷಿಯು

ಮದ್ದು ಗುಂಡಿನ
ಮೇಲಾಟ; ಮನುಷ್ಯತ್ವ
ಮರೀಚಿಕೆಯು

ಕಾದ ಹಂಚಾದ
ದೇಹಕೆ; ನಿನ್ನೊಲವು
ತಂಪು ಸಿಂಚನ

ಮೊಗ್ಗರಳುವ
ಸಮಯಕೆ ಕಾಯುವ
ದುಂಬಿಗುಲ್ಲಾಸ

ಯಾರೇ ಗೆಲ್ಲಲಿ
ಯುದ್ಧ; ಹೋದ ಜೀವವ
ಮತ್ತೆ ತರರು

ಒಲವಿನಲಿ
ಮಿಂದ ಜೋಡಿಯ; ಕಣ್ಣ
ತುಂಬೆಲ್ಲ ಸ್ವರ್ಗ

ಮನೆಯೊಳಗೆ
ಬಣ ಯುದ್ಧ; ನನ್ನದು
ಅಲಿಪ್ತ ನೀತಿ

ನಶೆ ತರಿಸು
ನಿನ್ನ ಕಣ್ಣ ನೋಟದಿ
ಕಾಮೋನ್ಮಾದವು
೧೦
ನಿನ್ನನಪ್ಪಿದ
ರವಿಕೆ ನಸೀಬದು
ಪೂರ್ವ ಜನ್ಮದ್ದು

– ಸಿದ್ದಲಿಂಗಪ್ಪ ಬೀಳಗಿ.ಹುನಗುಂದ
*****