ಅನುದಿನ‌ ಕವನ-೪೩೭, ಕವಿ: ಪಿ.ಬಿ. ಕೋಟೂರ, ಬೆಂಗಳೂರು, ಕವನದ ಶೀರ್ಷಿಕೆ: ಸದಾಶಯ

ಸದಾಶಯ

ಕೆಲವರಿಗೆ ಗುರಿಯಾಗು
ಹಲವರಿಗೆ ಗುರುವಾಗು
ನಲಿವರಿಗೆ ನೇರ ನೆರವಾಗು!

ಕಲಿವರಿಗೆ ಕಲಿಯಾಗು
ಕಲೆವರಿಗೆ ಕಲೆಯಾಗು
ಒಲವರಿಗೆ ವಾರಿ ವರವಾಗು !!

ಹರವರಿಗೆ ಹಗುರಾಗು
ಹರಿವರಿಗೆ ಹಗಲಾಗು
ಜರಿವರಿಗೆ ಜೇನ ಝರಿಯಾಗು !!

ತಳುಕರಿಗೆ ತೆಳುವಾಗು
ತುಳುಕರಿಗೆ ತಳವಾಗು
ಬಳುಕರಿಗೆ ಭಾಳ ಬೆಳಕಾಗು !!

ಹುಸಿಕರಿಗೆ ಹಸಿಯಾಗು
ಹಸಕರಿಗೆ ಹಸನಾಗು
ಬೆಸಕರಿಗೆ ಭಾಷ್ಯ ಬಸುವಾಗು !!

– ಪಿ.ಬಿ. ಕೋಟೂರ, ಬೆಂಗಳೂರು
*****