ಬಣ್ಣದೋಕುಳಿ
ಹೋಳಿಯ ಹಬ್ಬ
ವಿಧ – ವಿಧ ಬಣ್ಣಗಳ ಮೇಳೈಸಿ
ಬರಿದಾದ ಮನಗಳಿಗೆ ಹೋಳಿಯನೆರಚಿ
ಭಾವನೆಗಳಿಗೆ ಚೈತನ್ಯ ನೀಡಿ,
ನವ ಸ್ಪೂರ್ತಿ ತುಂಬುವುದು ಈ ಹಬ್ಬ !!
ದ್ವೇಷ – ಅಸೂಯೆ, ಮದ – ಮತ್ಸರದಂತಹ
ಕಲ್ಮಶಗಳೆಲ್ಲವ ತೊಡೆದು
ಹಳೆಯದೆಂಬುವುದ ಹಿಮ್ಮೆಟ್ಟಿ
ಹೊಸದರತ್ತ ಹೆಜ್ಜೆ ಹಾಕುವುದೇ
ಈ ಓಕುಳಿ ಹಬ್ಬ !!
ಗಂಡು – ಹೆಣ್ಣು, ಜಾತಿ – ಮತಗಳೆಂಬ
ಭೇದ ಭಾವವಿಲ್ಲದೇ
ಅಬಾಲವೃದ್ಧರಾಗಿ
ಸಕಲೈಶೈರ್ಯ ಪಡೆದಂತೆ ಸಂಭ್ರಮಿಸಿ
ರಂಗಿನಾಟ ಪ್ರದರ್ಶಿಸುವ
ರಂಗು ರಂಗಿನ ಹಬ್ಬ !!
ಕಾಮವನ್ನು ದಹಿಸಿ
ಕಾಮ – ಕ್ರೋಧವನ್ನು ಅಳಿಸಿ
ಸುಟ್ಟು ಭಸ್ಮಮಾಡಿ
ಜಗತ್ತಿಗೆ ಶಾಂತಿ ಮಂತ್ರವ
ಸಾರುವುದು ಈ ಹೋಳಿ ಹಬ್ಬ !!
-ಶೋಭಾ ಮಲ್ಕಿ ಒಡೆಯರ್,
ಹೂವಿನ ಹಡಗಲಿ
*****