ಅನುದಿನ ಕವನ-೪೪೭, ಕವಿ: ನಾಗೇಶ್ ಐನ್ಸ್ ಸ್ಟೈನ್, ಚಳ್ಳಕೆರೆ, ಕವನದ ಶೀರ್ಷಿಕೆ: ನಲಿ ಕಲಿ ಗಣಿತ

ನಲಿ ಕಲಿ ಗಣಿತ

ಗಣಿತವೆಂದರೆ ನಿನಗೆ ಏಕೆ ಭಯವಿದೆ?
ಬಾ ಶಾಲೆಗೆ ನಮ್ಮಲ್ಲಿ ಗಣಿತ ಕಿಟ್ ಇದೆ ||ಪ||

ಸ್ಥಾನಬೆಲೆ ಸೂಚಿ, ಚೌಕಳಿ ಬಿಲ್ಲೆ
ಅಬಾಕಸ್, ಮಣಿಸರ ಇಹವು ಕಿಟ್ಟಿನಲ್ಲೆ ಘನಾಕೃತಿ-ಜಾಲಾಕೃತಿ, ಭಿನ್ನರಾಶಿ ಪಟ್ಟಿ, ಅಳತೆ ಟೇಪು ಜೊತೆಗಿದೆ ಸ್ಥಾನಬೆಲೆ ಪಟ್ಟಿ Il1||

ಕೋನವನ್ನು ಕಲಿಯಲಿದೆ ಕೋನಮಾಪಕ
ಗಡಿಯಾರದ ಮಾದರಿಯಿದೆ ಕಾಲ ಸೂಚಕ ಮನರಂಜನೆ ಆಟಕ್ಕೆ ಇಲ್ಲಿದೆ ಟ್ಯಾನ್‌ ಗ್ರಾಮ್
ತೂಕಕ್ಕಿದೆ ತಕ್ಕಡಿ, ಒಂದು, ಹತ್ತು ಗ್ರಾಮ್ ||2||

ಬೇಸ್ ಹತ್ತರ ಬ್ಲಾಕುಗಳು ಕಿಟ್ಟಿನಲ್ಲಿವೆ
ಹಳದಿ, ನೀಲಿ, ಹಸಿರು, ಕೆಂಪು ಬಣ್ಣ ಹೊಂದಿವೆ
ಭಿನ್ನರಾಶಿ ಆಕಾರ, ದಶಮಾಂಶದ ಸೆಟ್ಟು, ಪರಿಕಲ್ಪನೆ ಕಾರ್ಡುಗಳನು ಹೊಂದಿಹುದು ಕಿಟ್ಟು ||3||

ಆಟಿಕೆ ಹಣ, ನಾಣ್ಯಗಳಿವೆ ಗಣಿತ ಕಿಟ್ಟಿನಲ್ಲಿ
ಜಿಯೋಬೋರ್ಡ್, ದಾಳ, ಕ್ಲಿಪ್ಪು ಬಳಸು ಕ್ಲಾಸಿನಲ್ಲಿ
ದಶಮಾಂಶದ ಸ್ಥಾನಬೆಲೆ ಪಟ್ಟಿಗಳುಂಟು ಮೂರ್ತಕ್ಕು-ಅಮೂರ್ತಕ್ಕು ಬೆಸೆಯಲು ನಂಟು ||4||

ಇಲಾಖೆಯ ಸಹಯೋಗದಿ ಅಕ್ಷರ ಸಂಸ್ಥೆ ಗಣಿತ ಕಲಿಕಾ ಆಂದೋಲನ ಹಮ್ಮಿಕೊಂಡಿದೆ
ಮೂರ್ತ, ಸಾಂಕೇತಿಕ, ಅಮೂರ್ತದಲ್ಲಿ ಕಲಿತು
ನಗುನಗುತ ಗಣಿತ ಕಲಿ, ಗೆಳೆಯರೊಡನೆ ಬೆರೆತು ||5||

-ನಾಗೇಶ್ ಐನ್ಸ್ ಸ್ಟೈನ್, ಚಳ್ಳಕೆರೆ
*****