ಅನುದಿನ ಕವನ-೪೬೦, ಕವಿ: ವೆಂಕಟೇಶ ಸಂಪ, ಸಾಗರ

ಕಡಲತಡಿಯೊಳಗಿಂದ
ಭೋರ್ಗರೆವ ನಿನ್ನಂದ
ಅರಿಯದಾದರು ಆದಿ ಅಂತ್ಯವನ್ನಾ!!

ಮೇಲೆದ್ದು ಹಾರ್ಯಾರಿ
ಕುಣಿವ ಚಿಗರೆಯ ತೆರದಿ
ಕಾಲಡಿ ನುಸುಳಿ ತೆರಳಿದ ತೆರೆಯ ಪರಿಯನ್ನಾ!!

ನೇಸರನ ನಗುವನ್ನ
ಬೆಳದಿಂಗಳ ಚಂದಿರನ
ಸೌಂದರ್ಯ ವೃದ್ಧಿಸುವ ಬಂಗಾರದಲೆಗಳ ಚೆಂದವನ್ನಾ!!

ಕಾದ ಮನಸಿನ ಕಾವು
ದಣಿದ ದೇಹದ ದಾಹ
ನೀಗುವ ನಿನ್ನ್ಯಾರು ಅರಿತಿಹರು ಅಳತೆ ಪರಿಧಿಯನ್ನಾ!!

-ವೆಂಕಟೇಶ ಸಂಪ, ಸಾಗರ
*****