ಅನುದಿನ ಕವನ-೪೬೧, ಕವಿ: ಕ್ಯಾದಿಗೆಹಾಳ್ ಉದೇದಪ್ಪ, ಹೊಸಪೇಟೆ, ಕವನದ ಶೀರ್ಷಿಕೆ: ದಾನವರಾಗದಿರಿ….. ಗಾಯನ: ಅನ್ವರಿ ಕುಮಾರಸ್ವಾಮಿ ಹಿರೇಮಠ, ವಿಶಾಖಪಟ್ಟಣ

ದಾನವರಾಗದಿರಿ……

ದಾನವರಾಗದಿರಿ ನೀವು ಮಾನವರಾಗಿರಿ
ಈ ಸೃಷ್ಟಿಯ ಮುಂದೆ ಎಲ್ಲಾ ಕ್ಷಣಿಕ
ಬಾಳಿರಿ ಅರಿತುಕೊಳ್ಳಿರಿ.

ಜಗದ ಅದ್ಭುತ ಪವಾಡಗಳು ಸೃಷ್ಟಿಯ ಲಯದಲಿ
ಸಕಲ ಜೀವಿಗಳ ವಿಸ್ಮಯವು ಪ್ರಕೃತಿ ಜಾಲದಲಿ
ಸುನಾಮಿ ಅಲೆಗಳ ಅರ್ಭಟವು ಅಬ್ಧಿಯ ಗರ್ಭದಲಿ
ಅಗ್ನಿಜ್ವಾಲೆ ಕುದಿಯುತ್ತಿದೆ ಭೂಮಂಡಲದ ಆಳದಲಿ

ಮನುಜನ ಅಂತ್ಯ ಸನಿಹವಾಗುತ್ತಿದೆ ಈ ಜಗದಲಿ
ಮೋಸ ವಂಚನೆ ನಡೆಯುತ್ತಿದೆ ನಿತ್ಯ ಭುವಿಯಲಿ
ಪಾಪ ಕರ್ಮಗಳು ತಾಂಡವಾಡುತ್ತಿವೆ ಸತ್ಯ ಜಗದಲಿ
ನಿತ್ಯ ಸತ್ಯವು ಕೊಲೆಯಾಗುತ್ತಿದೆ ಸುಳ್ಳಿನ ಕಂತೆಯಲಿ

ಧರ್ಮ ನೀತಿಗಳು ಅಳಿಯುತ್ತಿವೆ ಈ ಬ್ರಹ್ಮಾಂಡದಲಿ
ನಕ್ಷತ್ರಗಳು ಮಿಂಚಿ ಮರೆಯಾಗುತ್ತಿವೆ ಖಗೋಳದಲಿ
ಅಜ್ಞಾನ ಮನೆ ಮಾಡಿಕೊಂಡಿದೆ ನ್ಯಾಯ ನೀತಿಯಲಿ
ಅನ್ಯಾಯ ಅಧರ್ಮ ರಾರಾಜಿಸುತ್ತಿವೆ ಸಮಾಜದಲಿ

ಮಾನವೀಯತೆ ಮರೆಯುತ್ತಿದೆ ಮನುಕುಲ ಅಲ್ಲಿ
ಅಯ್ಯೋ ಪಾಪ ಎನ್ನುವ ಕಾಲ ದೂರ ಆಯ್ತು ಇಲ್ಲಿ
ನಂಬಿದ ವ್ಯಕ್ತಿ ಮೋಸಮಾಡುವ ಕಾಲಮತ್ತೆ ಬಂತು
ವಿಷದ ಬೀಜ ಹೆಮ್ಮರವಾಗಿ ಸ್ನೇಹ ಅಳಿದು ಹೋತು

-ಕ್ಯಾದಿಗೆಹಾಳ್ ಉದೇದಪ್ಪ, ಅಧ್ಯಾಪಕರು
ಪಿ.ವಿ.ಎಸ್.ಬಿ.ಸಿ.ಪ್ರೌಢ ಶಾಲೆ
ಹೊಸಪೇಟೆ.
*****

ಗಾಯನ: ಅನ್ವರಿ ಕುಮಾರಸ್ವಾಮಿ ಹಿರೇಮಠ, ವಿಶಾಖಪಟ್ಟಣ