ಅನುದಿನ‌ ಕವನ-೪೬೫, ಕವಿ: ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ

ಹೊಳೆ ದಡದಲಿ
ಹುಣ್ಣಿಮೆ
ಮೀಯುವ
ಹೊತ್ತು…

ಅವಳ
ಕಿಟಿಕಿಯ ಬಳಿ
ಗಾಳಿ ಪಿಸುಗುಟ್ಟಿತು…

ಗುಟ್ಟೊಂದು
ರಟ್ಟಾಗಿ ನೈದಿಲೆಯ
ಮೊಗ್ಗು
ಬೆವರಿ ಬಿರಿಯಿತು
ಬೆಳದಿಂಗಳ
ತಾಪಕೇ!

-ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ
*****