ವಿಶಾಖಪಟ್ಟಣ ಡಾ. ಪಂ ಪುಟ್ಟರಾಜ್ ಸೇವಾ ಸಮಿತಿಯಿಂದ ಸಾಹಿತಿ ಮಹೇಂದ್ರ ಕುರ್ಡಿಗೆ ಸನ್ಮಾನ

ಲಿಂಗಸೂಗೂರು, ಏ.12: ವಿಶಾಖಪಟ್ಟಣದ
ಡಾ. ಪಂ ಪುಟ್ಟರಾಜ್ ಸೇವಾ ಸಮಿತಿ ತಾಲೂಕಿನ ಅನ್ವರಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಜಾನಪದ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರು ಆಗಿರುವ ಸಾಹಿತಿ ಮಹೇಂದ್ರ ಕುರ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಡಾ. ಪಂ ಪುಟ್ಟರಾಜ್ ಗುರುಗಳ ಸ್ಮರಣೆಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹಟ್ಟಿ ಚಿನ್ನದ ಗಣಿಯ ವಿನಾಯಕ ವಿದ್ಯಾ ಸಂಸ್ಥೆಯ ಸಂಸ್ಥಾಪಕರು, ಕಲಾ ಪೋಷಕರೂ ಆದ ಮಹೇಂದ್ರ ಕುರ್ಡಿ ಅವರನ್ನು
ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಸಮಿತಿಯ ವಿಶಾಖಪಟ್ಟಣ ಜಿಲ್ಲಾ ಸಂಚಾಲಕರಾದ ಕುಮಾರಸ್ವಾಮಿ ಹಿರೇಮಠ ಅವರು ರಜೆಯ ಹಿನ್ನಲೆಯಲ್ಲಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸರಳ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದನ್ನು ಗ್ರಾಮದ ಹಿರಿಯರು ಶ್ಲಾಘಿಸಿದ್ದಾರೆ.
*****