ಅನುದಿನ‌ ಕವನ-೪೬೯, ಕವಿ: ಡಾ. ಬಿ. ಆರ್. ಕೃಷ್ಣಕುಮಾರ್, ಚಾಮರಾಜನಗರ. ಕವನ್ ಶೀರ್ಷಿಕೆ: ಜೈಭೀಮ್

ಜೈ ಭೀಮ್

ಜೈ ಭೀಮ್ ಎಂದರೆ ಹಸಿರು
ಬಹುಜನರ ಉಸಿರು.

ಜೈ ಭೀಮ್ ಎಂದರೆ ನಲಿವು
ನೋಡುವ ಕಣ್ಗಳ ಹಸಿವು.

ಜೈ ಭೀಮ್ ಎಂದರೆ ಒಲವು
ಸೋತ ಜನಗಳ ಗೆಲುವು.

ಜೈ ಭೀಮ್ ಎಂದರೆ ಪ್ರಾಣ
ಬಡವನೆದೆಯ ತ್ರಾಣ.

ಜೈ ಭೀಮ್ ಎಂದರೆ ಸಡಗರ
ತಿಂದಷ್ಟು ಸಿಹಿ ಓಗರ.

ಜೈ ಭೀಮ್ ಎಂದರೆ ಉಲ್ಲಾಸ
ದಲಿತರ ಬಾಳಿನ ಸಂತಸ.

ಜೈ ಭೀಮ್ ಎಂದರೆ ಹರ್ಷ
ಅಭಿಮಾನ ಹೆಚ್ಚುತ್ತಿದೆ ವರ್ಷಾ ವರ್ಷ

ಜೈ ಭೀಮ್ ಎಂದರೆ ಬಂಧುತ್ವ
ಅಪ್ಪಿಕೊಂಡಷ್ಟು ಸಹೋದರತ್ವ.

ಜೈ ಭೀಮ್ ಎಂದರೆ ಆಸೆ
ಯಾರಿಗೂ ಮಾಡದು ನಿರಾಶೆ.

ಜೈ ಭೀಮ್ ಎಂದರೆ ಗುರು
ಚಳುವಳಿಯ ಸದ್ದು ಶುರು.

ಜೈ ಭೀಮ್ ಎಂದರೆ ಬಂಧು
ಕೈ ಬಿಡದು ಎಂದೆಂದು.

ಜೈ ಭೀಮ್ ಎಂದರೆ ಜೀವನ
ನೋಡಿದ ಕಣ್ಣು ಪಾವನ.

ಜೈ ಭೀಮ್ ಎಂದರೆ ಬದುಕು
ಬರಹ ಓದುತ್ತಾ ಹುಡುಕು.

ಜೈ ಭೀಮ್ ಎಂದರೆ ಕಾವು
ಮರೆತುಬಿಡಿ ನೋವು.

ಜೈ ಭೀಮ್ ಎಂದರೆ ಉತ್ಸಾಹ
ಎಲ್ಲೆಲ್ಲೂ ಜೈಕಾರದ ಪ್ರವಾಹ.

ಜೈ ಭೀಮ್ ಎಂದರೆ ಛಲ
ಬಡಬಗ್ಗರಿಗಿದು ಬಲ.

ಜೈ ಭೀಮ್ ಎಂದರೆ ಪ್ರೀತಿ
ಪ್ರಜಾಪ್ರಭುತ್ವದ ನೀತಿ.

ಜೈ ಭೀಮ್ ಎಂದರೆ ಪ್ರೇಮ
ಜಗದ ಒಳಿತು ಬಯಸಿದ ನಿಷ್ಕಾಮ.

ಜೈ ಭೀಮ್ ಎಂದರೆ ಕಾರುಣ್ಯ
ಓದಿದಷ್ಟು ನಾವೀನ್ಯ.

ಜೈ ಭೀಮ್ ಎಂದರೆ ಚಿಗುರು
ಜನರ ಆಶೋತ್ತರಗಳ ಹೆಸರು

– ಡಾ. ಬಿ. ಆರ್. ಕೃಷ್ಣಕುಮಾರ್
ಚಾಮರಾಜನಗರ