ಅನುದಿನ ಕವನ-೪೭೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ಬಳ್ಳಾರಿ ಜಿಲ್ಲೆ, ಕವನದ ಶೀರ್ಷಿಕೆ: ಇಳೆಯ ಎಲೆ

ಇಳೆಯ ಎಲೆ

ಬೆವರ ಗುಂಡಿನ ಮೊಳಕೆಗೆ
ನೇತಾಡುತ್ತಿವೆ ಸತ್ತ ಪದಕಗಳು
ಇದಕೆ ಬೇಸತ್ತ ಎಲೆಗಳು
ಒಣಗಿ ಇಳೆಗೆ ಇಳಿಯುತ್ತಿವೆ….

ಜಾಗಟೆಯ ಹಲಗೆಗೆ
ನೇಸರದ ಮಂಕುತನ,
ಗೊತ್ತಿಲ್ಲ,
ಹೆಗಲು ಮಡಚದೆ
ಎದೆಯುಬ್ಬಿ ಕಾಯುತಿದೆ
ಹಣೆಬರಹದ ಬಟ್ಟೆ….

ಚುಚ್ಛುತಿದೆ ಸಮರದ ರೆಕ್ಕೆ
ಚಂಡೂವಿನ ಆಶ್ವಾಸನೆಗೆ
ಆಳೆತ್ತರದ ಕಣಜ ವ್ಯಂಗ್ಯದಲಿ
ಜಾರುತ್ತಿದೆ….

ನೆಲೆಯಿಲ್ಲದ ಕಪಾಟಿಗೆ ಬಿಡುವಿಲ್ಲದ ಬ್ಲೇಡುಗಳು,
ನಾಲಗೆಯಲಿ ಒದ್ದಾಡುತ್ತಿವೆ…

ಭುಗಿಲೆದ್ದ ಬೆಂಕಿಯ ಚಂಡಾಡಿಟಿಕೆಗೆ
ಅಲುಗಾಡುತ್ತಿದೆ ಜ್ಞಾನದ ನೆಲ

ಮುಗಿಲು ಮುಟ್ಟಲು
ಯತ್ನಿಸಿದೆ ಹಳೆಯ
ಸಾಗುವಳಿಯ ನೇಗಿಲುಗಳು…..

ರಂಗೋಕುಳಿಯ ಸ್ವಾರ್ಥಕೆ
ಸೇರಿಕೊಳ್ಲುತ್ತಿವೆ ತಾಡಪಾಲಿನ
ಬೂಟುಗಳು…

ಶ್ವೇತವರ್ಣದ ಗುಹೆಗೆ
ಕೇಸರಿಯ ಭಂಡಾರ?
ಪುನರಾಗಮನದ ದ್ವಾರಕೆ
ಶಿಲಾಯುಗದ ಕನಸು
ಹಬ್ಬಿಕೊಳ್ಲಲು ಮುಂದಾಗಿ
ತುದಿಯೊಳು ನಿ೦ತಿದೆ

ಹೋರಾಟದ ಕಡಿವಾಣಕೆ
ಜಾತ್ಯತೀತದ ಸಮ್ಮಿಲನದ
ಮೆರವಣಿಗೆ…..

ಯಾವ ಯುಗವ ಹೆಸರಿಸೋಣ?
ಆದರೂ ಕೊನೆಗೊಳ್ಳಲಿಲ್ಲವಲ್ಲ
ಇಹದ ವ್ಯತೆಯು….

-ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ಬಳ್ಳಾರಿ ಜಿಲ್ಲೆ
*****