ಅನುದಿನ‌ ಕವನ-೪೭೫, ಕವಿ: ಎ. ಎನ್.‌ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಬವಣೆ

ಬವಣೆ

ನಮ್ಮನ್ನು ನೋಯಿಸುವುದು
ಜಗವಲ್ಲ.. ಜನಗಳಲ್ಲ..
ನಮ್ಮದೇ ನಿರೀಕ್ಷೆಗಳು.!

ನಮ್ಮನ್ನು ನರಳಿಸುವುದು
ಕಾಲ.. ಘಟನೆಗಳಲ್ಲ..
ನಮ್ಮದೇ ಕನಸುಗಳು..!

ನಮ್ಮನ್ನು ಸೋಲಿಸುವುದು
ಸಮಸ್ಯೆ.. ಸವಾಲುಗಳಲ್ಲ..
ನಮ್ಮದೇ ದೌರ್ಬಲ್ಯಗಳು..!

ನಮ್ಮನ್ನು ಕಣ್ಣೀರಿಡಿಸುವುದು
ಕಷ್ಟ.. ಕಾರ್ಪಣ್ಯಗಳಲ್ಲ..
ನಮ್ಮದೇ ಕಾಮನೆಗಳು..!

ನಿರ್ಮೋಹಿ ನಿರ್ಲಿಪ್ತರಾಗಿ
ನಡೆದರಷ್ಟೆ ಇಲ್ಲಿ ನಿರಾಳ.!

ಆದರೆ ಹಾಳು-ಹೃದಯ
ಮಹಾಮರ್ಕಟ-ಮನಸು
ಕಲಿಯುವುದಿಲ್ಲ ಪಾಠ.!

ಹಾ..ಗಾ..ಗಿ.. ತಪ್ಪಿದ್ದಲ್ಲ
ಸಾಯುವವರೆಗೂ..
ಕಂಬನಿ-ನೋವು-ಸಂಕಟ.!

-ಎ.ಎನ್.ರಮೇಶ್. ಗುಬ್ಬಿ.
*****