ಅರಳುವ ಮೊಗ್ಗು
ಅರಳುವ ಮೊಗ್ಗೊಂದು
ತಾನು ಯಾರ ಸೇವೆಗಾಗಿ ಸೇರುವೆ ಎಂದು ಮೊದಲೇ ಯೋಚಿಸುವುದಿಲ್ಲ
ಅರಳುವ ಮೊಗ್ಗೊಂದು
ತಾನು ಯಾರ ಸೇವೆಗಾಗಿ ಸೇರುವೆ ಎಂದು ಮೊದಲೇ ಯೋಚಿಸುವುದಿಲ್ಲ
ತನ್ನಷ್ಟಕ್ಕೆ ತಾನು ಅರಳುವುದು
ಕಂಪಾ ಸೂಸುವುದು
ಬೆಳೆಯುವ ಹೆಣ್ಣೊಂದು ತಾನು ಯಾರಿಗಾಗಿ ಬಾಳುವೆ ಎಂದು ಮೊದಲೇ ಯೋಚಿಸುವುದಿಲ್ಲ
ಬೆಳೆಯುವ ಹೆಣ್ಣೊಂದು ತಾನು ಯಾರಿಗಾಗಿ ಬಾಳುವೆ ಎಂದು ಮೊದಲೇ ಯೋಚಿಸುವುದಿಲ್ಲ
ನೂರಾರು ಕನಸ್ಸುಗಳನ್ನು ಕಂಡು
ಆಸೆಯ ಗೋಪುರವನ್ನು ಏರಿ
ಕನಸ್ಸನ್ನು ಕಾಣುವಳು ಹೆಣ್ಣು
-ಮಳವಳ್ಳಿ ನಾಗರತ್ನ [PC(ರೇಖಾಚಿತ್ರ): ಚೇತನಾ ತೀರ್ಥಹಳ್ಳಿ]
*****