‘ಭಯೋತ್ಪಾದನೆ ಮತ್ತು ಭಯೋತ್ಪಾದಕ ಬೆದರಿಕೆಗೆ ಪ್ರತಿರೋಧ’ ಕೃತಿ‌ ಇಂದು ಸಿಎಂ ಬೊಮ್ಮಾಯಿ ಅವರಿಂದ ಲೋಕಾರ್ಪಣೆ

ಬೆಂಗಳೂರು, ಏ.25: ಜಗತ್ತಿನ ಎಲ್ಲ ದೇಶಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಭಯೋತ್ಪಾದನೆ.
ಅದನ್ನು ಹತ್ತಿಕ್ಕಲು ಕಾರ್ಯತಂತ್ರವನ್ನು ರೂಪಿಸುವುದು ಎಲ್ಲ ಸರ್ಕಾರಗಳ ಮುಂದಿರುವ ದೊಡ್ಡ ಸವಾಲು.
ಈ ಸಂಕೀರ್ಣ ವಿಷಯವನ್ನು ಕುರಿತ, ನಿವೃತ್ತ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಪಚ್ನಂದ ಅವರ ಪುಸ್ತಕವನ್ನು ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತು ಇದನ್ನು ಪ್ರಕಟಿಸಿದೆ.
‘ಭಯೋತ್ಪಾದನೆ ಮತ್ತು ಭಯೋತ್ಪಾದಕ ಬೆದರಿಕೆಗೆ ಪ್ರತಿರೋಧ’ ಕೃತಿಯನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ ದಲ್ಲಿ
ಏ.25ರಂದು ಸೋಮವಾರ ಸಂಜೆ 4ಗಂಟೆಗೆ ಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಗೊಳಿಸುವರು..
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ಅವರು ಕೃತಿ ಪರಿಚಯ ಮಾಡಲಿದ್ದಾರೆ.
ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ.ವೀರಣ್ಣ ಅವರು ಅಧ್ಯಕ್ಷತೆ ವಹಿಸುವರು. ಕೃತಿ ಅನುವಾದಿಸಿರುವ ಹಿರಿಯ ಸಾಹಿತಿ ನಾಡೋಜ ಗೊರುಚ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
*****