ಅನುದಿನ ಕವನ-೪೮೨, ಕವಯತ್ರಿ ಹೂವಿನ ಹಡಗಲಿಯ ಶೋಭ ಮಲ್ಕಿಒಡೆಯರ್ ಅವರ ಐದು ಹನಿಗವಿತೆಗಳು!

೫ ಹನಿಗವನಗಳು

೧.ಪ್ರಕೃತಿ…..
ಮಳೆಯಾಗುವ ಮುನ್ನ
ಒಂದಕ್ಕೊಂದು
ಗುಡುಗಿನ ಘರ್ಷಣೆ ;
ನಂತರ ನೋಡಲು
ಸುಂದರ
ಕಾಮನ ಬಿಲ್ಲಿನ
ಆಕರ್ಷಣೆ.

2.ಜವಾಬ್ದಾರಿ…..
ನೀವು
ಯಾವಾಗಲೂ
ಎಲ್ಲರ ಮೇಲೂ
ಸಿಟ್ಟು ಮಾಡಿಕೊಳ್ಳುವಿರಿ
ಹೌದು, ಅದು ನಿಜ ;
ಹೇಗೆ ಹೇಳಲಿ….?
ಒಬ್ಬ
ಜವಾಬ್ದಾರಿ ವ್ಯಕ್ತಿಗೆ
ಸಿಟ್ಟು ಬರುವುದು
ಸಹಜ.

3.ಹುಟ್ಟು ಹಬ್ಬ…..
ವೈಭವದ
ಆಚರಣೆಯ
ಹುಟ್ಟು ಹಬ್ಬದ
ಹುಮ್ಮಸ್ಸು ಒಂದೆಡೆ ;
ಜಾರುತಿದೆ
ವಯಸ್ಸು
ಎಂಬ ದಿಗಿಲು
ಇನ್ನೊಂದೆಡೆ.

4.ಗುರಿ…..
ಬದುಕಬೇಕೆಂಬ
ಛಲ ಹೊತ್ತವನ
ಸಾಧನೆಗೆ
ಹಲವಾರು ದಾರಿಗಳು ;
ಸ್ವಾದವಿಲ್ಲದೆ, ಗುರಿಯಿಲ್ಲದೆ
ಬದುಕುವವನ
ಜೀವನ
ಯಾವತ್ತೂ ಬರಡು ಬಾಳು.

5.ಪರಿಚಯ……
ಪೂರ್ವಾಪರ
ತಿಳಿಯದೆ
ಪರಿಚಿತರಾಗಬಾರದು ;
ಮನಸ್ಸಿನ ಮರ್ಮ
ಅರಿಯದೆ
ಮನೆಗೆ ಸೇರಿಸಬಾರದು.

-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****