ಸಖಿಗೀತಾ
ಮೊದ ಮೊದಲು ನೀ ನನ್ನ ಸಖಿ ಯಷ್ಟೇ ಖಚಿತ; ಬರುತ್ತಾ ಆದೆ ಬಲು ಹತ್ತಿರ ನನ್ನ ಹೃದಯ ಕಲಶಕೆ
ಮೌನದ ದೂರಿಗೆ ನನ್ನ ನಿನ್ನ ಪಯಣ
ಸಾಗಿತು ಸುಮ್ಮನೆ ಪ್ರೀತಿಯ ಮೂಲಕ
ಮೆಲ್ಲನೆ….
ಕಚಗುಳಿಯ ನೆನಪುಗಳು.
ಬಲು ಸುಂದರ ; ಅರ್ಥವಲ್ಲದ ಕನವರಿಕೆಗಳು
ಮಾಸುತಲಿವೆ..ನಿನ್ನಯ ಸ್ಪರ್ಶದ ಸವಿಗೆ
ತಿಳಿಯದಾಯ್ತು ಈ ಪ್ರೀತಿಯ
ಕೋರಿಕೆ ಸಲ್ಲಿಸಿರುವೆ ಪ್ರತಿ ಪುಟದ ಮನವಿಯ
ಕಡತಕೆ ನಿನ್ನ ಸಹಿ ಬೇಕಾಗಿದೆ….
ಇಂತಿ..
-ಶ್ರೀಕಾಂತ ಮಳೆಗಲ್,ಬಳ್ಳಾರಿ
*****