ಹೊಸಪೇಟೆ, ಏ.29 : ಅಪರಿಚಿತ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದು ತಲೆಕೆಳಗಾಗಿ ಬಿದ್ದರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹೊಸಪೇಟೆ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಎಂ.ಎಸ್ . ನಾಗೇಂದ್ರ ಅವರು ಪವಾಡ ಸದೃಶವಾಗಿ
ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಬೆಳಗಿನ ಜಾವ ತಮ್ಮ ಸುಜುಕಿ ಬಲೆನೋ ಕಾರನ್ನು ಚಲಾಯಿಸಿಕೊಂಡು ಹೊಸಪೇಟೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಡಣಾಪುರ ಬಳಿಇರುವ ಬ್ರಿಡ್ಜ್ ಮೇಲೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಅಪರಿಚಿತ ಲಾರಿಯೊಂದು ಕಾರಿಗೆ ಡಿಕ್ಕಿಹೊಡೆದು ಪರಾರಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರು ಸುತ್ತು ಹಾಕಿ ರಸ್ತೆ ಪಕ್ಕದಲ್ಲಿನ ಅಡ್ಡಗೋಡೆಗೆ ಬಡಿದು ಪಲ್ಟಿ ಹೊಡೆದು ಗಾಲಿಗಳು ಮೇಲಾಗಿ ಉಲ್ಟಾ ಹೆದ್ದಾರಿಯಲ್ಲೆ ಬಿದ್ದಿದೆ.
ನಾಗೇಂದ್ರ ಅವರು ಸೀಟಿನಲ್ಲೆ ತಲೆಕೆಳಗಾಗಿದ್ದಾರೆ. ಸುರಕ್ಷತೆಯ ಕಾರಣದಿಂದ ಸೀಲ್ಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಪವಾಡ ಸದೃಶವಾಗಿ ಯಾವುದೇ ಗಾಯಗಳಾಗದೇ ಪೆಟ್ಟಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಅಪಘಾತ ಮಾಡಿ ಹೋಗಿರುವ ಲಾರಿಯ ಶೋಧಕಾರ್ಯದಲ್ಲಿ ತೊಡಗಿದ್ದಾರೆ.
*****