ಅನುದಿನ ಕವನ-೪೯೨, ಕವಯತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ: ರಂಹೊ ಐದು ಹನಿಗವಿತೆಗಳು!

ರಂಹೊ ಐದು ಹನಿಗವಿತೆಗಳು!


ಕಲ್ಲುಗಳನ್ನೂ ಸ್ಪರ್ಶಿಸುವುದು ಹೂಗಳಿಗೂ ಗೊತ್ತು
ಒಣ ಧಿಮಾಕಿನ ಮನುಷ್ಯನದು ಬರೀ ಗತ್ತು!!!


ಬೇಯಬೇಕು…
ಬೆಳಕೇ ಆಗಲು..!
ನೋಯಬೇಕು..
ಕವಿತೆ ಗೆಲ್ಲಲು..!


ಇದೆ ಎಲ್ಲೋ ಭರವಸೆಯ ತುಣುಕು
ಅಳುಕದಿರು ಮನವೇ
ಕತ್ತಲೆಗಳ ಕತ್ತು ಹಿಸುಕಿ
ಬರುವುದೊಂದು ಬೆಳಕು!


ಮಾತುಗಳೆಲ್ಲ
ಹೂವೇ ಆಗುವುದಿದ್ದರೆ
ಯಾವ ಎದೆಯಲ್ಲಿಯೂ
ಬಿರುಕು ಕಾಣುತ್ತಿರಲಿಲ್ಲ!


ಇಲ್ಲಿ ಏನೂ ಆಗಬಹುದು..
ಪ್ರಭುವೇ..
ಹೂವುಗಳೂ ಇರಿಯದಿರಲಿ!!

-ರಂಹೊ, ತುಮಕೂರು
*****