ಚಳ್ಳಗುರ್ಕಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಬಿ.‌ನಾಗೇಂದ್ರ: ಶಾಲೆಯ 10 ನೂತನ ಕೊಠಡಿ, ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ, ಮೇ 27: ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಶುಕ್ರವಾರ ತಾಲೂಕಿನ ಚಳ್ಳಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದರು.


ಶಾಲೆಯ ಹಳೆಯ ಹತ್ತು ಕೊಠಡಿಗಳು ಶಿಥಿಲವಾಗಿರುವುದು, ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯಗಳ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ಕಂಡ ಶಾಸಕ ಬಿ. ನಾಗೇಂದ್ರ ಅವರು ಜಿಲ್ಲಾಧಿಕಾರಿಗಳಿಗೆ ಕರೆಮಾಡಿ ಶಾಲೆಯ ಸಮಸ್ಯೆಗಳ ಬಗ್ಗೆ ತಿಳಿಸಿ, ಡಿಎಂಎಫ್ ಅನುದಾನದ ಅಡಿಯಲ್ಲಿ 10 ನೂತನ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳನ್ನು ನಿರ್ಮಿಸಲು ಮನವಿ ಮಾಡಿದರು.
ಬಿಸಿ ಊಟಕ್ಕೆ ಬಂದ ಆಹಾರ ಧಾನ್ಯಗಳನ್ನು ಪರಿಶೀಲಿಸಿ ಗುಣಮಟ್ಟದ ಆಹಾರವನ್ನು ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


ಶ್ರೀ ಚಳ್ಳಗುರ್ಕಿ ಎರ್ರಿತಾತನ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಎರ್ರಿತಾತನವರ ಆಶೀರ್ವಾದ ಪಡೆದು, ದೇವಸ್ಥಾನದಲ್ಲಿಯೇ ಭಕ್ತರ ಜತೆ ಪ್ರಸಾದ ಸ್ವೀಕರಿಸಿ ಗಮನ ಸೆಳೆದರು.
ಜೂ. 4,5 ಮತ್ತು 6 ರಂದು ಶ್ರೀ ಎರ್ರಿತಾತ ಅವರ ಹೂವಿನ ರಥೋತ್ಸವ ನಡೆಯುತ್ತಿದ್ದು ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ದುರಸ್ಥಿ ಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ ಸಿದ್ದಲಿಂಗಮೂರ್ತಿ, ಇಸಿಓ ಗೂಳೆಪ್ಪ ಬೆಳ್ಳಿಕಟ್ಟೆ,
ಮುಖಂಡರುಗಳಾದ ಗೋವರ್ಧನ್ ರೆಡ್ಡಿ, ಬಿ.ದುರುಗಣ್ಣ, ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿಂಧುವಾಳ ಗಾದಿಲಿಂಗನಗೌಡ, ಮಹಾನಗರ ಪಾಲಿಕೆ ಸದಸ್ಯ ಕೆ.ಹೊನ್ನಪ್ಪ, ಯರ್ರಿಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಹಗರಿ ಗೋವಿಂದ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಶಿರೇಖಾ, ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪೇರುದ್ರ.ಜಿ, ನಾಗರಾಜ್ ಹುಬ್ಬಳ್ಳಿ, ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀನಿವಾಸಲು, ಅಗಸರ ಚಿದಾನಂದ, ಸಣ್ಣ ತಿಪ್ಪೇರುದ್ರ, ಪಿ.ಎರ್ರಿಸ್ವಾಮಿ, ಹೊನ್ನಸ್ವಾಮಿ, ಸಾಯಿಕುಮಾರ್, ಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.
*****