ಐದು ಹನಿಗವನಗಳು
1.ಮಗ👇
ಮದುವೆಯಾಗೋಕಿಂತ ಮುಂಚೆ
ನಿಮ್ಮನ್ನು
ಹೂವಿನಂತೆ
ಜೋಪಾನ ಮಾಡ್ತೀನಿ
ಎಂದ ಮಗ ;
ಮದುವೆಯಾದಮೇಲೆ
ಹೆಂಡ್ತಿ ಕಟ್ಟಿಕೊಂಡು
ಖಾಲಿ ಮಾಡ್ದ ಜಾಗ.
2 ಮಕ್ಕಳು👇
ಆಗದಿದ್ದರೆ…..?
ಮಕ್ಕಳಾಗಲಿಲ್ಲವಲ್ಲಾ
ಎಂಬ
ಒಂದೇ ಸೊಲ್ಲು ;
ಮಕ್ಕಳಾದರೆ
ಬರೆದಿಡಬೇಕಲ್ಲಾ
ಅವರಿಗೆ ವಿಲ್ಲು.
3. ಮಗಳು👇
ಮಾವನಿಗೂ
ಅಳಿಯನಿಗೂ
ಇಲ್ಲದಿರೆ ನಂಟು ;
ಮಗಳ ಬಾಳಿಗೆ
ತೌರುಮನೆ
ಕನ್ನಡಿಯೊಳಗಿನ ಗಂಟು.
4. ಮನೆ👇
ಆಗ ಮನೆ ತುಂಬಾ
ಮಕ್ಕಳಿದ್ದರೂ
ಬಾಳೋಕೆ ಒಂದೇ ಮನೆ ;
ಈಗ ಮನೆಗೊಂದೇ
ಮಗನಿದ್ದರೂ
ಬದುಕೋಕೆ ಬೇರೆ ಮನೆ.
5. ಮಗಧೀರರು👇
ಮಕ್ಕಳನ್ನು
ಪ್ರೀತಿಯಿಂದ – ಮುದ್ದಿನಿಂದ
ಸಾಕಿ – ಸಲುಹಿ
ಬೆಳೆಸುತ್ತಾರೆ
ಅಪ್ಪ – ಅಮ್ಮ ;
ಅದೇ ಮಕ್ಕಳು
ತಾಯಿ – ತಂದೆಯ
ಮುಪ್ಪಿನ ದಿನಗಳಲ್ಲಿ
ಹುಡುಕುತ್ತಾರೆ ವೃದ್ಧಾಶ್ರಮ.
-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****