ಅನುದಿನ ಕವನ-೫೧೬, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ನೀನು ನಾನು

ನೀನು-ನಾನು

ನೀನು ಕಡಲು
ನಾನು ನದಿ

ನೀನು ಬೇರು
ನಾನು ಹೂವು

ನೀನು ಭಾವ
ನಾನು ರಾಗ

ನೀನು ಉಸಿರು
ನಾನು ದೇಹ

ನೀನು ಮೋಡ
ನಾನು ಹನಿ

ನೀನು ನಿದ್ದೆ
ನಾನು ಕನಸು

ನೀನು ಕೊಳಲು
ನಾನು ಗಾನ

ನೀನು ಚಿಟ್ಟೆ
ನಾನು ರೆಕ್ಕೆ

ನೀನು ಆಗಸ
ನಾನು ನೀಲ

ನೀನು ಬಯಲು
ನಾನು ವಿಸ್ತಾರ

ನೀನು ಅಧರ
ನಾನು ನಗು

ನೀನು ಕಣ್ಣು
ನಾನು ನೋಟ

ನೀನು ನಾನು
ನಾನು ನೀನು


-ಸಿದ್ಧರಾಮ ಕೂಡ್ಲಿಗಿ