ಅನುದಿನ‌ ಕವನ-೫೧೭, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ತೋರಣಗಲ್ಲು. ಕವನದ ಶೀರ್ಷಿಕೆ: ಮಹಲ‌ ಬಾಧೆ

ಮಹಲ ಭಾಧೆ

ಮೌನ ಮಹಲಿಗೆ
ಕತ್ತಲ ನಗೆ, ಇದಕೆ
ಪಿಸುಗುಟ್ಟು ತ್ತಿವೆ
ಪಂಜರದ ಪಾರಿವಾಳಗಳು….

ಪೂರ್ಣೊದಯದ ಸ್ವಾಗತಕೆ
ಕಿಟಕಿಯ ಗಾಜಿನ ಚೂರು
ಕೌತುಕದಿ ಕಾಯುತಿದೆ…..

ಕನಸ ಧಮನಿಗೆ
ಕುದುರೆಯ ಏರಿಳಿತ,
ಎಲೆಯಿಲ್ಲದ ಮರದ ಕೊಂಬೆ
ಬೆದರಿ,ನಿಲುಗಾಲಲ್ಲೆ
ಎಣಿಕೆ ಹಾಕುತಿದೆ ಗೌರವದ
ಹೂವ ಧರಿಸಲು…..

ಸ್ವಾತಂತ್ರವಿಲ್ಲದ ಗೆಜ್ಜೆ
ಹಗಲಿರುಳು ನಡೆದಾಡುತಿದೆ
ಅರುಣ ಕಿರಣವ ಸ್ಪರ್ಶಿಸಲು…..

ತಿಳಿಯ ದೀವಿಗೆಗೆ
ನಾದ ಹಿಡಿತವಿಲ್ಲದೇ
ಮನ ಮುರಿದು ಕುಣಿಯುತಿದೆ….

ಭಾವನೆಯ ಸಾರಕೆ
ಸುತ್ತಲೂ ಕಾಗೆಗಳ ಭಾಧೆ
ಹಾಲಾಹಲದ ಗಾಯವ ಮಾಡಿದೆ…..

ಅಂಗಳದ ಪಾಯ
ನಗೆಯ ಅರ್ಥೈಸಲು
ಹೋರಾಡುತಿದೆ…..

ಸಂತಸದ ನಾದಸ್ವರಕೆ
ಗಿಳಿಯು ಪಂಜರದೊಳಿಲ್ಲದೆ
ತನ್ನ ಆಕಾಶದಿ ತಾನೇ
ತಿರುಗುತ್ತ ಶುಭ ವೇಳೆಯ
ನುಡಿಯುತಿದೆ…..


-ಡಾ.ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ತೋರಣಗಲ್ಲು
*****

[PC:ಬಾಣದ ಮಾರುತಿ, ಧಾರವಾಡ]