ಅನುದಿನ ಕವನ-೫೨೭, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಐದು ಹನಿಗಳು……

ಐದು ಹನಿಗಳು……👇

೧.ಕುರುಡು ಕಾಂಚಾಣ
ಬದುಕಿಗೆ ಆಸರೆ ನಿಜ;
ಅದನ್ನು ಹಿಂಬಾಲತ್ತಿ ಹೋದೋರು
ಅನುಭವಿಸಿಲ್ಲೇನು ಸಜ!.

೨.ತಿಳಿದಾವ ತೆಪ್ಪಗಿರ್ತಾನ
ಜೊಳ್ಳಿದ್ದಾವ ಡೊಳ್ಳು ಬಾರಿಸ್ತಾನ.                         ಇಂತಹ ಮಾತು ಹೇಳಿದ ಶರಣ
ನಮಗೆ ದಾರಿತೋರಸ್ತಾನ.

೩.ಮಜ್ಜಿಗೆ ಇಲ್ದ ಊಟ
ಊಟ ಊಟಾನ ಅಲ್ಲ;
ಲಜ್ಜಿ ಇಲ್ದ ಮನುಷ್ಯ
ಮನುಷ್ಯಾನ ಅಲ್ಲ.

೪.ಉಂಡದ್ದು ಉಟ್ಡಿದ್ದು
ಶಾಶ್ವತ ಅಲ್ಲ;
ಒಳ್ಳೇದು ಕೆಟ್ಡದ್ದು ಮಾತ್ರ
ನಮ್ಮೊಂದಿಗಿರ್ತಾವು ಬೇರೆ ಯಾವ್ದೂಅಲ್ಲ.

೫.ಇಲ್ದೋರಿಗೆ ಕೊಡೋದು
ದೇವ್ರಿಗೆ ಕೊಟ್ಟಂಗ,
ದೇವ್ರಿಗೆ ಕೊಟ್ಟದ್ದು
ಕೆಡೋದರ ಹ್ಯಂಗ!

 

-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
*****