ಅನುದಿನ ಕವನ-೫೩೩, ಕವಯತ್ರಿ: ಸುಮತಿ ಸುಬ್ರಹ್ಮಣ್ಯ, ಮೈಸೂರು, ಕವನದ ಶೀರ್ಷಿಕೆ: ಮನೆ ಒಡತಿ

ಕವಯತ್ರಿ ಪರಿಚಯ:
ಬದುಕು ಚಿಕ್ಕದು ಆದ್ರೆ ಸಾಧನೆ ಮಾತ್ರ ದೊಡ್ಡದು ….ಹುಟ್ಟುವುದು ಸಾಧನೆ ಆಗಲಾರದು..ಆದರೆ ನಮ್ಮ ಅಂತ್ಯ ಮಾತ್ರ ಅದ್ಭುತ ಸಾಧನೆಯ ಜೊತೆ ಆಗಲಿ ಎಂಬ ನುಡಿಯೇ ಇದೆ..ಹಾಗೆ ಈಗ ನಾ ಹೇಳಲು ಹೊರಟಿರುವ ಸಾಧಕರು ಕೂಡ ಹೀಗೆಯೇ. ತಮ್ಮ ಜೀವನವನ್ನೇ ಸಾಧನೆಗೆ ಮುಡಿಪಾಗಿ ಇಟ್ಟ ಅದ್ಭುತ ವ್ಯಕ್ತಿತ್ವ ಇವರದ್ದು.ಬದುಕು ಹೇಗೆ ಸಾಗಲಿ ಆದ್ರೆ ಬದುಕು ಬೆಳೆಯುವರ ಬೆಳೆಸುತ್ತಾ ನಾವೂ ಬೆಳೆಯುತ್ತಾ ಸಾಗಬೇಕು ಎಂಬುದು ಇವರ ಗುಣ ಇವರು ನಮ್ಮ ನಿಮ್ಮ ನಡುವೆಯೇ ಇರುವ ಅದ್ಭುತ ಸಾಧಕಿ..ಇವರ ಬದುಕಿನ ಯಾನವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಇವರು ಶ್ರೀಮತಿ ಸುಮತಿ ಸುಬ್ರಹ್ಮಣ್ಯ
ಹುಟ್ಟಿದ್ದು 21-12-1958
ತಾಯಿ- ಶ್ರೀಮತಿ ಅನ್ನಪೂರ್ಣ ಶಾಸ್ತ್ರೀ,, ಮತ್ತು ತಂದೆ- ಸುಬ್ಬಾಶಾಸ್ತ್ರಿ ಇವರ ಮಗಳಾಗಿ ಜನಿಸಿದ ಇವರು ಬಾಲ್ಯದಿಂದಲೇ ಉತ್ತಮ ಸಂಸ್ಕಾರದ ಜೊತೆ ಬೆಳೆದು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಅದರ ಜೊತೆಗೆ ಆಗಿನ ಕಾಲದ ಅತ್ಯುನ್ನತ ವಿಧ್ಯಾಭ್ಯಾಸ ಆದ ಎಂ.ಎ ,,ಎಂ.ಇಡಿ,,ಎಲ್.ಎಲ್.ಬಿ,, ಮತ್ತು ಕೆ.ಎ.ಎಸ್ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಪಾಸ್ ಆದ ಸಾಧಕಿ ಇವರು..ಬದುಕಿನಲ್ಲಿ ಪ್ರಯತ್ನ ಇಲ್ಲದೆ ಏನೂ ಆಗುವುದಿಲ್ಲ ಅನ್ನೋದು ಸಾರ್ವಕಾಲಿಕ ಸತ್ಯ..ಹೀಗೆಯೇ ತಮ್ಮ ಅವಿರತ ಪ್ರಯತ್ನ ಮತ್ತು ಬದುಕನ್ನು ಪ್ರೀತಿಸುವ ಇವರ ಗುಣದಿಂದ ಉನ್ನತ ವಿದ್ಯಾಭ್ಯಾಸ ಮುಗಿಸಿದ ಇವರು ಕೆಂದ್ರಿಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರದ್ದು ಆಲ್ ಇಂಡಿಯಾ ಸರ್ವಿಸ್ ಅನ್ನೋದು ಇನ್ನೊಂದು ಸಾಧನೆ. ಸಿ.ಬಿ.ಎಸ್. ಸಿ ,
ಎನ್ ಐ ಓ ಎಸ್ ಪರಿಕ್ಷಾ ನಿರ್ವಾಹಕಿಯಾಗಿ ಎರಡು ದಶಕಗಳ ಅನುಭವ ಇವರದ್ದು
ಸಮಾಜಶಾಸ್ತ್ರ ,,ವಿಜ್ಞಾನ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಎರಡುವರೆ ದಶಕಗಳ ಕಾಲ ನಿರ್ವಾಹಕಿಯಾಗಿ ನಡೆಸಿ ಪ್ರತಿ ವರ್ಷವು ಮಕ್ಕಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ವಿಜೇತರಾಗಿ ಮಾಡುವಲ್ಲಿ ಇವರ ಪರಿಶ್ರಮ ಅಪಾರ..ಇಂತವರು ನಮ್ಮ ಯುಗಾದಿ ಬಳಗದ ದೊಡ್ಡ ಸಾಧಕಿ ಹಾಗೆಯೇ ಹೆಮ್ಮೆ ಕೂಡ
ಉತ್ತಮ ಗುಣಮಟ್ಟದ ದೇಶಸೇವೆಯಲ್ಲಿ ಇವರು ಕಲಿಸಿ ಬೆಳೆಸಿದ ವಿದ್ಯಾರ್ಥಿಗಳು ತೊಡಗಿಕೊಡಿರುವುದು ಬಹಳ ಸಂತೋಷವಾಗುತ್ತದೆ.
*ಮಹಾರಾಣಿಸ್ ಕಾಲೆಜ್ ಮೈಸೂರು 1978,
*ಶಾರದಾವಿಲಾಸ್ ಪ್ರಶಿಕ್ಷಣ ಸಂಸ್ಥೆ1985
ಎರಡು ಬಾರಿ ಇವರಿಗೆ ಚಾಂಪಿಯನ್ಸ್ ಆಫ್ ಚಾಂಪಿಯನ್ ಅವಾರ್ಡ್ ಕೂಡ ಬಂದಿದೆ.
ಆಪ್ತ ಸಲಹಾಗಾತಿ, ಮತ್ತು ವೃದ್ಧಾಶ್ರಮಗಳ ಸಹಾಯಕಿಯಾಗಿಯು ಕೂಡ ಇವರ ಕಾರ್ಯ ಅಮೋಘವಾದುದು. ಪ್ರಾಣಾಯಾಮ ಕ್ಯಾಂಪ್,
ಸಂಘ ಸಂಸ್ಥೆಗಳ ಸೇವೆಯನ್ನು ಹಾನರರಿಯಾಗಿ ಮಾಡುತ್ತಿರುವ ಇವರ ಸೇವೆ ನಿಸ್ವಾರ್ಥವಾಗಿ ಹೀಗೆಯೇ ಮುಂದುವರೆಯಲಿ ಎಂಬ ಆಶಯ ನನ್ನದು..
ಆಲ್ ಇಂಡಿಯಾ ಕ್ರೌಡ್ ಟೀಚರ್ಸ್ ಗೆ ಇಪ್ಪತ್ತು ಬಾರಿ ಪಾಠ ಮಾಡಿದ್ದು ಇವರ ಇನ್ನೊಂದು ಹೆಗ್ಗಳಿಕೆ.
ಬ್ಯಾಂಡ್ಮಿಂಟನ್ ನಲ್ಲಿ ನ್ಯಾಷನಲ್ ಪ್ಲೇಯರ್ ಇವರು. ಮೈಸೂರು ಯೂನಿವರ್ಸಿಟಿಯಲ್ಲಿ ಐದು ವರ್ಷ ಕ್ಯಾಪ್ಟನ್ ಕಂ ಪ್ಲೇಯರ್ ಆಗಿ ತಮ್ಮ ಸ್ಪೋರ್ಟ್ಸ್ ಬದುಕು ಶುರು ಮಾಡಿದ ಇವರು ನಮ್ಮ ನಡುವಿನ ಅದೆಷ್ಟೋ ಎಲೆ ಮರೆಯಲ್ಲಿ ಇರುವ ಕ್ರೀಡಾಳುಗಳಿಗೆ ಸ್ಪೂರ್ತಿ ಆಗಬಲ್ಲರು.ಬಾಂಬೆಯಲ್ಲಿ ಒಬ್ಬ ಅಂಡರ್ ವರ್ಲ್ಡ್ ಲಿಂಕ್ ಇದ್ದ ಕುಟುಂಬದಲ್ಲಿ ಬೆಳೆದಿದ್ದ ಹುಡುಗ ತಂದೆ ತಾಯಿಯನ್ನ ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡು ವಿದ್ಯಾಭ್ಯಾಸ ನಿಲ್ಲಿಸಿ ಮಾನಸಿಕ ಖಿನ್ನತೆಗೆ ಜಾರಿದ್ದಾಗ ಆತನನ್ನು ತಮ್ಮ ಮನೆಯಲ್ಲಿ ಇಟ್ಟು ಓದಿಸಿ ಆತನ ಬದುಕನ್ನು ಅದ್ಭುತವಾಗಿ ರೂಪಿಸಿ ಇವತ್ತು ಆತನನ್ನು ಒಬ್ಬ ಬ್ಯಾಂಕ್ ಆಫೀಸರ್ ಆಗಿ ಮಾಡುವಲ್ಲಿ ಇವರ ಪಾತ್ರ ಅವಿಸ್ಮರಣೀಯ.ಈ ಮಗುವಿಗೆ ಶಿಕ್ಷಣ ನೀಡಿ ಆತನ ಭವಿಷ್ಯಕ್ಕೆ ಬುನಾದಿ ಕೊಟ್ಟ ಇವರಿಗೆ ಬಾಂಬೆಯಲ್ಲಿ ಇನ್ನರ್ ವೀಲ್ ಕಂಪನಿಯ ಕಡೆಯಿಂದ ಬೆಸ್ಟ್ ಟೀಚರ್ ಎಂಬ ಅವಾರ್ಡ್ ಸಿಕ್ಕಿರೋದು ನನ್ನ ಯುಗಾದಿಯ ಹೆಮ್ಮೆ.ಇಂತಹ ಅದೆಷ್ಟೋ ಮಾನಸಿಕ ಖಿನ್ನತೆಗೆ ಒಳಗಾದ ಮಕ್ಕಳನ್ನು ಕೌನ್ಸೆಲಿಂಗ್ ಮೂಲಕ ಮಾತಾಡಿಸಿ ಅವರ ಮನಸ್ಸು ಪರಿವರ್ತನೆ ಮಾಡಿ ಅವರನ್ನ ಉತ್ತಮ ಪ್ರಜೆಯಾಗಿ ರೂಪಿಸಿದ ಕೀರ್ತಿ ಇವರದ್ದು.ಮತ್ತು ಆಲ್ ಇಂಡಿಯಾ ಪ್ರಾಜೆಕ್ಟ್ ಗೈಡ್ ಆಗಿ ಕೂಡ ಇವರು ಕಾರ್ಯ ನಿರ್ವಹಿಸಿದ್ದಾರೆ…ಮಕ್ಕಳ ಉಜ್ವಲ ಭವಿಷ್ಯಕ್ಕೆ ಇವರ ಕೊಡುಗೆ ಅಪಾರ..ಮೂವತ್ತು ವರ್ಷಗಳ ಸುದೀರ್ಘ ಕಾಲ ರಂಗಭೂಮಿಯ ನಂಟು ಹೊಂದಿದ್ದು ಹಲವಾರು ನಾಟಕಗಳಿಗೆ ಸ್ಕ್ರಿಪ್ಟ್ ಬರೆದು ನಟಿಸಿ ನಿರ್ದೇಶನ ಮಾಡಿದ ಹೆಗ್ಗಳಿಗೆ ಇವರದ್ದು.                                                    *****

ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಸುಮತಿ ಸುಬ್ರಹ್ಮಣ್ಯ ಅವರ “ಮನೆಒಡತಿ” ಕವಿತೆ ಪಾತ್ರವಾಗಿದೆ.

(ಸಂಪಾದಕರು)👇

ಮನೆ ಒಡತಿ

ನಾನಂತೆ ಹಳೆಯ ಕಾಲದ ಸಿಸಿ ಕ್ಯಾಮರಾ
ಹಗಲಿರುಳು ದುಡಿದೆ ಕುಳಿತೆ ಈಗಷ್ಟೇ
ಓಲೆ ಉರಿ ಹಾಕುವುದರಿಂದ ಹಿಡಿದು ಐವತ್ತು
ಬಿಂದಿಗೆ ನೀರು ಬಾವಿಯಲ್ಲಿ ಸೇದಿ ತುಂಬಿದೆ

ಮನೆಅಂಗಳ ಹಿತ್ತಲ ಗಿಡಗಳಿಗೆ ನೀರು ಉಣಿಸೆ
ಅಕ್ಕರೆಯ ನಗುವಿತ್ತೇ,ಹೃದಯದಿ ಅಪ್ಪಿ ಕರದಿ ಸವರಿದೆ
ಫಲಪುಷ್ಪ ಕೊಟ್ಟವೆನಗೆ ಬಿಡಿಸಿ ದೇವಗರ್ಪಿಸೆ
ಸಾರ್ಥಕ ನಗು ಹೊರಹೊಮ್ಮೆ ಮೈ ಮನ ರೋಮಾಂಚನ

ಸುಸ್ತು ದಣಿವು ಕಾಣದ ಮಾಗಿದ ದೇಹ
ಗೃಹದ ಎಲ್ಲರ ಕ್ಷೇಮದ ಹರಕೆಯ ತಾಣ
ಬೇಯಿಸಿ ಬಸಿದು ಬಡಿಸಿ ಬೆವರಿಳಿಸಿದೆ
ಉಂಡವರ ತೃಪ್ತಿ ಚಹರ ನನ್ನ ಸಮಾಧಾನ

ಮನೆಯ ಸಕಲ ಆಗು ಹೋಗುಗಳ ನಿಗಾ
ಕ್ಷಣ ಬಿಡದೆ ಗಮನಿಸಿ ತಿದ್ದಿ ತೀಡೆ ಆಗಾ
ಅಜ್ಜಿಯಿಲ್ಲದ ಮನೆ ಏಕೆ ಬೇಕು
ನಿಶ್ಚಿಂತೆ ನಿರಾಯಾಸ ನಿರ್ಮಲ ಹಸ್ತ

ದಾರಿಹೋಕರ ಹಳ್ಳಿ ಜನರ ಬೇಸಿಗೆ ಬಾಯಾರಿಕೆ
ನೀರು ಮಜ್ಜಿಗೆ, ಬೆಲ್ಲ ಇತ್ತು ಹರಸಿದ ದೇಹ
ಕರುಣೆಯ ರಸ ಹರಿಸಿ ಹಾರೈಸೆ ಎಲ್ಲರ
ಈ ಮನೆಯ ಮಹಾತಾಯಿ
ನಮನವು ಮಾ.‌..


-ಸುಮತಿ ಸುಬ್ರಹ್ಮಣ್ಯ, ಮೈಸೂರು
*****