ಯೋಗ ಸಾಧನೆ(ಕವನ), ಕವಿ: ಕುಮಾರ ಸ್ವಾಮಿ ಹಿರೇಮಠ ಅನ್ವರಿ, ಸಿಐಎಸ್ಎಫ್ ಪಾಂಡಿಚೇರಿ, ತಮಿಳುನಾಡು

ಯೋಗ ಸಾಧನೆ

ಜ್ಞಾನವ ಸಂಪಾದಿಸೋ ಓ ಮನುಜ
ಅಜ್ಞಾನವನ್ನು ಓಡಿಸೋ
ಧ್ಯಾನದಿಂದಲಿ ನಿನ್ನ ಜ್ಞಾನನ ವೃದ್ಧಿಯ ಮಾಡು
ಜ್ಞಾನಿಯಲ್ಲಿ ಸರ್ವ ಜ್ಞಾನಿ ಎಂದೆನಿಸಯ್ಯ
ಜ್ಞಾನವ ಸಂಪಾದಿಸೋ

ಆತ್ಮವ ಪರಿಶೋದಿಸೊ ಜೀವಾತ್ಮದಲ್ಲಿ
ಪರಮಾತ್ಮನ ಪೂಜಿಸೋ
ನಿರ್ಮಲ ಧ್ಯಾನದಿಂದ ಮನವಾ ಶುದ್ದಿಯ ಮಾಡಿ
ಆತ್ಮ ಜೀವಾತ್ಮದಿಂದ ನೀನು
ಸ್ವಯಂ ಪರಮಾತ್ಮ ಎನಿಸಯ್ಯ
ಜ್ಞಾನವ ಸಂಪಾದಿಸೋ

ಭೋಗ ವಿಲಾಸವನ್ನು ನೀ ತೊರೆದು
ಯೋಗದಿಂದಲಿ ಸಾದಿಸೋ
ಯೋಗ ಸಾಧನೆಯಿಂದ ರೋಗ ಮುಕ್ತಿಯ ಮಾಡಿ
ಯೋಗಿಯಲ್ಲಿ ಸರ್ವಯೋಗಿ ಎಂದೆನಿಸಯ್ಯ
ಜ್ಞಾನವ ಸಂಪಾದಿಸೋ ಓ ಮನುಜ
ಅಜ್ಞಾನವನ್ನು ಓಡಿಸೋ

ಇಷ್ಟ ಲಿಂಗವ ಪಡೆದು ನೀ ಶಿವನನ್ನು
ನಿಷ್ಠೆಯಿಂದಲಿ ಪೂಜಿಸೋ
ದುಷ್ಟರಿಗೆ ಶಿಕ್ಷಕನಾಗಿ ಶಿಷ್ಟ ರಕ್ಷಣೆಗೈದು
ಕಷ್ಟದಲ್ಲಿ ನಿನ್ನ ಗುರುವನ್ನು ನೆನಸಯ್ಯ
ಜ್ಞಾನವ ಸಂಪಾದಿಸೋ ಮನುಜ


-ಕುಮಾರ ಸ್ವಾಮಿ ಹಿರೇಮಠ ಅನ್ವರಿ, ಸಿಐಎಸ್ಎಫ್
ಪಾಂಡಿಚೇರಿ, ತಮಿಳನಾಡು
*****