ಅನುದಿನ‌ ಕವನ-೫೪೩, ಕವಿ:ಎಂ.ಜಿ.ದೇಶಪಾಂಡೆ, ಬೀದರ್, ಕವನದ ಶೀರ್ಷಿಕೆ:ರೈತ….

ರೈತ….

ರೈತ ತನ್ನ ಇಡೀ ಬದಕು
ಕೆಸರಲ್ಲಿ ಕಳೆಯುತ್ತಾನೆ
ಅವನ ದುಡಿಮೆಯಿಂದ
ಮೊಸರು ನೀಡುತ್ತಾನೆ

ಎಂದೂ ಹೋರಾಟವಿಲ್ಲ
ತನ್ನ ಹೆಸರಿಗಾಗಿ
ಸದಾ ಬದಕು ಮೀಸಲಿಟ್ಟ
ಹಸಿರು ಹಸಿರಗಾಗಿ

ಅವನ ಕಂಗಳಲ್ಲಿ ಲೋಕ
ಬದುಕಲೆಂಬ ಆಸೆ
ಬರಗಾಲ ಸಾಲ ಮಾತ್ರ
ತರುತ್ತವೆ ಆತನಿಗೆ ನಿರಾಸೆ

ರೈತ ಈ ಲೋಕದ ಬೆಳಕು
ಮರೆತಿಹೆವು ನಾವು
ಬಡತನ ಕಷ್ಟ ತಂದೊಡ್ಡಿವೆ
ಆತನಿಗೆ ನಿತ್ಯ ಸಾವು..

-ಎಂ.ಜಿ.ದೇಶಪಾಂಡೆ, ಬೀದರ್
*****

21:38