ರಂಹೊ ಸಾಲುಗಳು…👇
ಕಟ್ಟಿದ ಮನೆಯೊಳಗೆ
ಕಟ್ಟಿದವನು ಇರುವುದಿಲ್ಲ!
ನೆಲಕ್ಕೆ ಬೆವರು ಬಸಿದವನ ಮನೆಯಲ್ಲಿ
ಒಪ್ಪೊತ್ತು ಒಲೆ ಉರಿದರೂ ಹಬ್ಬವೇ!
ಗಿಡಕೆ ನೀರೆರೆದವನ ಮನೆಯ
ದೇವರ ತಲೆಯ ಮೇಲೆ ಎಕ್ಕದ ಹೂ!
ಕಬ್ಬಿಣ ಬಡಿವವನ ಮನೆಯಲ್ಲಿ
ಕುಡುಗೋಲೇ ಇಲ್ಲ!
ಕೆತ್ತಿದವನು ಕಲ್ಲಾಗುತ್ತಲೇ ಇರುತ್ತಾನೆ
ಕಲೆ ಪ್ರಕಾಶಿಸುತ್ತದೆ!
ಹತ್ತು ಮಕ್ಕಳಿಗೂ ಬದುಕು ಕೊಟ್ಟ ಹೆತ್ತವ್ವ
ಅನಾಥಶ್ರಮದಲ್ಲಿ ನಿಡುಸುಯ್ಯುತ್ತಾಳೆ!
-ರಂಹೊ(ರಂಗಮ್ಮ ಹೊದೇಕಲ್), ತುಮಕೂರು
*****
ಮಾರ್ಮಿಕ