ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ಸಾಕ್ಷ್ಯಚಿತ್ರ ಬಿಡುಗಡೆ, ಗಣ್ಯರಿಂದ ಸನ್ಮಾನ

ಬೆಂಗಳೂರು, ಜೂ. 29: ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಿರಿಯ ಜಾನಪದ ಕಲಾವಿದರ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಅಕಾಡೆಮಿಯ ಅಧ್ಯಕ್ಷೆ ಪದ್ಮಶ್ರೀ ಮಾತ ಮಂಜಮ್ಮ ಜೋಗತಿ, ಹಿರಿಯ ಸಾಹಿತಿ ಡಾ ಅರವಿಂದ ಮಾಲಗತ್ತಿ, ಸರ್ಕಾರದ ಕಾರ್ಯದರ್ಶಿ ಡಾ ಮಂಜುಳಾ ಮತ್ತಿತರ ಗಣ್ಯರು ಗೌರವಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ಶ್ರೀಮತಿ ನಮ್ರತ, ಸದಸ್ಯರಾದ ಜೋಗಿಲ ಸಿದ್ದರಾಜು, ಸಿ ಎನ್ ನರಸಿಂಹ ಮೂರ್ತಿ ಅವರು ವೇದಿಕೆಯಲ್ಲಿದ್ದರು.


ಖ್ಯಾತ ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣ, ರಂಗತಜ್ಞ ಡಾ ಗೋವಿಂದ ಸ್ವಾಮಿ, ಜೀ ಕನ್ನಡ ವಾಹಿನಿಯ ನಿರ್ದೇಶಕ ಶರಣಯ್ಯ, ಅಲೆಮಾರಿ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಂದೋಳ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಮುಖಂಡ ಕುಳಾಯಪ್ಪ, ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ವೆಂಕಟರಮಣಪ್ಪ, ಪ್ರದಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಶಿಳ್ಳೇಕ್ಯಾತ ಸಮುದಾಯದ ರಾಜ್ಯ ಅಧ್ಯಕ್ಷ ಮಂಜುನಾಥ್, ಗಿರಿಶ್, ಚಿನ್ನರಾಜು ಮತ್ತಿತರರು ಮುಖಂಡರು ಅಶ್ವ ರಾಮಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದರು.

(ಚಿತ್ರ-ಮಾಹಿತಿ: ಡಾ. ಅಶ್ವ ರಾಮು, ದರೋಜಿ)