ಅನುದಿನ ಕವನ-೫೪೮, ಕವಯತ್ರಿ: ಶೋಭಾ ಮಲ್ಕಿ ಒಡೆಯರ್🖊️ ಹೂವಿನ ಹಡಗಲಿ, ಕವನದ ಶೀರ್ಷಿಕೆ: ಆಂತರ್ಯದಲ್ಲಿ… ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ

👉ಆಂತರ್ಯದಲ್ಲಿ👇

ನೀನೊಂದು ಮನಸ್ಸಿನ ಮೌನ
ಹೇಗೆ ನಾ ತಿಳಿಯಲಿ ನಿನ್ನ….
ಅರಿತರು ಬೆರೆತರು
ಮರೆತರೂ
ಭಾವನೆಗಳೊಳಗೆ ತುಂಬಿದೆ
ಬೆಂಕಿಯ ಬೇಗೆ!
ಉಸಿರುಸಿರಲ್ಲೂ ಹಸಿರಾಗಿರಲು
ತವಕಿಸುತ್ತಿದೆ ಮನ
ಅರಳಬೇಕಿದೆ ಹೂ ಬನ
ತನು ತವಕದಲಿ ತುಂಬಿಹುದು ಬಯಕೆ
ಆದರೂ……
ಅತ್ಮವಂಚನೆ ಯಾಕೆ ?
ಕಣ್ಗಳಲ್ಲೆ ಸಾವಿರದ
ಅರ್ಥ ಹೇಳುವಾಗ
ತುಟಿ – ತುಟಿಗಳ ಸಂಭಾಷಣೆಗಳೇಕೆ ?
ಹೃದಯದಾಳದಲ್ಲಿ ಅಡಗಿದೆ
ಅಲುಗಾಡದಂತಹ ಪ್ರೀತಿ
ಮೊಗೆದಷ್ಟು ಜಿನುಗುತ್ತಿದೆ
ಸಿಹಿ ಜೇನಿನ ರೀತಿ
ಇಂತಿದ್ದರೂ
ಇನ್ನೇಕೆ ಬಿಗುಮಾನ
ಸ್ವಾಭಿಮಾನ
ನಾನೆಂದಿಗೂ ನಿನಗಾಗಿಯೇ
ಮತ್ತೇಕೆ ಅನುಮಾನ.


-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****

One thought on “ಅನುದಿನ ಕವನ-೫೪೮, ಕವಯತ್ರಿ: ಶೋಭಾ ಮಲ್ಕಿ ಒಡೆಯರ್🖊️ ಹೂವಿನ ಹಡಗಲಿ, ಕವನದ ಶೀರ್ಷಿಕೆ: ಆಂತರ್ಯದಲ್ಲಿ… ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ

Comments are closed.