ಪರಿಸರ ಜಾಗೃತಿ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ‌ ಪ್ರಾಚಾರ್ಯ ಎಂ. ಮೋಹನರೆಡ್ಡಿ

ಬಳ್ಳಾರಿ, ಜು.3: ಪರಿಸರ ಜಾಗೃತಿ, ಸಾಹಿತ್ಯೋತ್ಸವದ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಗಮನ ಸೆಳೆದಿದ್ದಾರೆ ನಗರದ ಪ್ರಾಚಾರ್ಯರೊಬ್ಬರು!

ಹೌದು! ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಸರಕಾರಿ ಪಿ.ಯು ಕಾಲೇಜಿನ ಪ್ರಾಚಾರ್ಯ ಎಂ. ಮೋಹನ ರೆಡ್ಡಿ ಅವರೇ ತಮ್ಮ 57 ನೇ ಹುಟ್ಟುಹಬ್ಬವನ್ನು ಕಾಲೇಜಿನ ಆವರಣದಲ್ಲಿ 57 ಸಸಿಗಳನ್ನು ಗಣ್ಯರಿಂದ ನೆಡಸುವ ಮೂಲಕ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರ ಶಾಸಕ ಜಿ.‌ಸೋಮಶೇಖರ ರೆಡ್ಡಿ, ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಗುಲ್ಬರ್ಗಾ ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಕೆ ಎಂ‌ಮಹೇಶ್ವರ ಸ್ವಾಮಿ, ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ‌ನಿರ್ದೇಶಕ ಟಿ.ಕೊಟ್ರಪ್ಪ, ಕೊಪ್ಪಳ, ಬಳ್ಳಾರಿ ವಿಜಯನಗರ ಜಿಲ್ಲೆಗಳ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ನಾಗರಾಜ್, ಅನಿಲ್, ಶಾಂತಪ್ಪ ಟಿ, ನಿವೃತ್ತ ಸಹಾಯಕ‌ ಪ್ರಾಧ್ಯಾಪಕ, ಎನ್.‌ಬಸವರಾಜ್, ನಿವೃತ್ತ ಪಶು ವೈದ್ಯಧಿಕಾರಿ ಡಾ.‌ಪಿ ಎಲ್ ಗಾದಿಲಿಂಗನಗೌಡ ಮತ್ತಿತರ ಗಣ್ಯರು ವಿಶಿಷ್ಟ ಹುಟ್ಟುಹಬ್ಬಕ್ಕೆ ಸಾಕ್ಷಿಯಾದರು.
ವನ ಮಹೋತ್ಸದ ಬಳಿಕ ಜರುಗಿದ ಪೊಲೀಸ್ ಎಂ. ಗೋವಿಂದರಾಜ್ ನೆನಪಿನ ಕಸಾಪ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಹಿತಿಗಳು, ಗಣ್ಯರು ಪರಿಸರದ ಬಗ್ಗೆ ಅರಿವುಮೂಡಿಸಿದ ಶತಾಯುಷಿ ನಾಡೋಜ ಸಾಲುಮರದ ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು.


ಮೋಹನ ರೆಡ್ಡಿ ಅವರು ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಅವರ ಅಭಿಮಾನಿಯಾಗಿದ್ದು ಕಾಲೇಜಿನ ಆವರಣ ಹಸಿರಿನಿಂದ ಕಂಗೊಳಿಸುವಂತೆ ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ಯಪಡಿಸಿದರು.
ಶ್ರೀ ಎಂ. ಗೋವಿಂದರಾಜು ದತ್ತಿ ನಿಧಿ ಉಪನ್ಯಾಸ ನೀಡಿದ ಕಾರ್ಯಕ್ರಮದ ಆದ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಎಂ.‌ಮೋಹನರೆಡ್ಡಿ ಅವರು ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಖ್ಯಾತ ಪರಿಸರವಾದಿ ನಾಡೋಜ ಸಾಲುಮರದ ತಿಮ್ಮಕ್ಕ ಅವರ ಪಾತ್ರ ಹಿರಿದು. ಸಾಲುಮರದ ತಿಮ್ಮಕ್ಕ ಅವರ ಜೀವನವೇ ವಿದ್ಯಾರ್ಥಿಗಳಿಗೆ ಮಾದರಿ ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಹಸೀಮ್ ಸಾಬ್, ಕುಮಾರಸ್ವಾಮಿ, ಮಂಜುನಾಥ್ ಎ. ಆರ್,
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಟಿ.ದುರುಗಪ್ಪ, ಪದಾಧಿಕಾರಿಗಳಾದ ಡಾ. ಕೆ ಬಸಪ್ಪ,  ಸಿದ್ದೇಶ್, ಹನುಮೇಶ್ ಮತ್ತಿತರರು ಉಪಸ್ಥಿತರಿದ್ದರು.


*****