ಅನುದಿನ ಕವನ-೫೫೩, ಕವಯತ್ರಿ: -ರಂ.ಹೊ(ರಂಗಮ್ಮ ಹೊದೇಕಲ್) ತುಮಕೂರು, ಕವನದ ಶೀರ್ಷಿಕೆ: ಮಕ್ಳ ಪದ್ಯ

ಮಕ್ಳ ಪದ

ಅಪ್ಪ- ಅಮ್ಮಂಗೆ ನಾನು ಅರ್ಥವೇ ಆಗಲ್ಲ
ಅಕ್ಷರ ನಂಗರ್ಥಾಗೋದು ಕಷ್ಟನೇ ಅಲ್ವ||

ಅಪ್ಪ ಇರ್ತಾರೆ ನಿತ್ಯ ನಶೆಯ ಮೇಲೆ
ಅಮ್ಮ ಕೈ ತೊಳಿತಿರ್ತಾಳೆ ಕಣ್ಣೀರಲ್ಲೆ||

ಪುಸ್ತಕ ಕಿತ್ತು ಎಸ್ದೇ ಬಿಡ್ತಾರೆ ನಮ್ಮಪ್ಪ
ಸಿಟ್ ಮಾಡ್ಕಂಡು ಬಸ್ ಹತ್ತಿ ಹೊರಟೇ ಬಿಡ್ತಾಳೆ ಅಮ್ಮ||

ಅಕ್ಷರ ಬೇಕು ಅಂತ ನಂಗೂ ತುಂಬ ಆಸೆ
ಅದ್ಕೂ ಮೊದಲು ನಂಗೆ ಅಪ್ಪ ಅಮ್ಮನ ಆಸೆ||

ಎಲ್ಲರಿಗೂ ಕೈ ಮುಗಿದು ಕೇಳ್ಕೋತೀನಿ ನಾನು
ಮಕ್ಳ ಮನ್ಸು ಹೂವಿದ್ದಂಗೆ ಅರ್ಥಮಾಡ್ಕೊಳಿ ನೀವು||

-ರಂ.ಹೊ(ರಂಗಮ್ಮ ಹೊದೇಕಲ್) ತುಮಕೂರು
*****

One thought on “ಅನುದಿನ ಕವನ-೫೫೩, ಕವಯತ್ರಿ: -ರಂ.ಹೊ(ರಂಗಮ್ಮ ಹೊದೇಕಲ್) ತುಮಕೂರು, ಕವನದ ಶೀರ್ಷಿಕೆ: ಮಕ್ಳ ಪದ್ಯ

Comments are closed.