ಅನುದಿನ ಕವನ-೫೫೪, ಕವಿ: ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ, ಕವನದ ಶೀರ್ಷಿಕೆ: ಕವಿತೆ!

“ಕವಿತೆಯ ಮೇಲೊಂದು ಕವಿತೆ. ಕವಿಯ ಆಂತರ್ಯ, ಕಾವ್ಯದ ಸೌಂದರ್ಯ, ಬದುಕಿನ ಮಾಧುರ್ಯಗಳ ಅವಿನಾಭಾವದ ಭಾವಗೀತೆ ಎಂದು‌ ಹೇಳುತ್ತಾರೆ ಕವಿ ಎ.ಎನ್.ರಮೇಶ್ ಗುಬ್ಬಿ ಅವರು….!
👇👇👇👇👇

ಕವಿತೆ..!

ಪದಕೆ-ಪದ ಜೋಡಿಸಿ
ಭಾವಕೆ-ಜೀವ ಬೆರೆಸಿ
ಮೀಟಬೇಕಿದೆ…
ಕವಿತೆಯೆಂಬ ವೀಣೆಯನ್ನು.!

ಮಧು-ಮಧುರ ಇಂಚರ
ತುಂಬಬೇಕಿದೆ….
ಮನದ ಕೋಣೆಯನ್ನು.!

ಕವಿತೆಯೆಂದರೆ…..
ಜಗವ ಮುದಗೊಳಿಸಿ
ಮೆಚ್ಚುವ ಕ್ರಿಯೆಯಲ್ಲ.!
ಕವಿ ತನ್ನೊಳಗೆ ತಾನೇ
ಅರಳುವ ಪ್ರಕ್ರಿಯೆ…!!

-ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ
*****