ಸಾಹಿತಿ, ಪತ್ರಕರ್ತ ರಮೇಶ್ ಹಿರೇಜಂಬೂರು ಅವರಿಗೆ ರಾಜಶ್ರೀ ಹಕ್ಕ-ಬುಕ್ಕ ದೇವರಾಯ ರಾಜ್ಯ ಪ್ರಶಸ್ತಿ

ಬೆಂಗಳೂರು, ಜು.8: ಸಾಹಿತಿ, ಪತ್ರಕರ್ತ, ಹೋರಾಟಗಾರ ರಮೇಶ್ ಹಿರೇಜಂಬೂರು ಅವರಿಗೆ ರಾಜಶ್ರೀ ಹಕ್ಕ-ಬುಕ್ಕ ದೇವರಾಯ ರಾಜ್ಯ ಪ್ರಶಸ್ತಿ ಘೋಷಿಸಲಾಗಿದೆ.
ದೆಹಲಿಯ ಅಖಂಡ ಭಾರತ ಹಕ್ಕ-ಬುಕ್ಕ ದೇವರಾಯ ಕ್ಷತ್ರಿಯ ನಾಯಕ ಮಹಾಸಭಾ ಈ ಪ್ರಶಸ್ತಿ‌ಯನ್ನು ಪ್ರಕಟಿಸಿದೆ.


ರಮೇಶ್ ಹಿರೇಜಂಬೂರು ಅವರು ಹಕ್ಕ- ಬುಕ್ಕರು, ನಾಯಕರ ಸಮುದಾಯದ ಕುರಿತು ಸಂಶೋಧನೆ, ಹೋರಾಟ, ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಕಾರ್ಯವೈಖರಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಈ ರಾಜಶ್ರೀ ಹಕ್ಕಬುಕ್ಕ ದೇವರಾಯ ರಾಜ್ಯ ಪ್ರಶಸ್ತಿಯನ್ನು
ಮಹಾದೇವರಾಯರ 925 ನೇ‌ ವರ್ಷದ ನೇಪಾಳ – ಬಿಹಾರ ವಿಜಯೋತ್ಸವ ದಿನದ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗಿದೆ.
ಜು. 10 ರಂದು ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡ ಹುಲಿಕುಂಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ಹಿರೇಜಂಬೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಖಂಡ ಭಾರತ ಹಕ್ಕಬುಕ್ಕ ದೇವರಾಯ ಕ್ಷತ್ರಿಯ ನಾಯಕ ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ದೇವರಾಜು ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****