ಕನಸುಗಳಂದ್ರ
ನೀಲಿ ಬಾನಂಗಳದಲಿ
ಮೂಡಿ ಬಂದಾ ಚಂದ್ರ
ಈ ಎದೆಯಂಗಳದಲಿ
ಆಸೆ ತಂದಿ ನೀ ಚಂದ್ರ
ನೀ ಕಲ್ಲ ಮನಸಲಿ
ಅರ್ಥ ತಂದಿ, ಪ್ರೀತಿ ಅಂದ್ರ
ಏನೇನೋ ಹೇಳೋ ಕನಸಲಿ
ನನಗೆ,ದನಿ ಇಲ್ಲ ನಿನ್ಮುಂದೆ ನಿಂತ್ರ..
ಇಡೀ ರಾತ್ರಿ ನಿನ್ನ ನೆನಪಲಿ
ನಾ , ಕನವರಿಸುತ ಮುಂಜಾನೆದ್ರ !
ಕಣ್ಮುಂದೆನೆ ಬಂದ ನೀ ನಗುತಲಿ
ಮೆಲ್ಲ..ಗ ಕೈ ಹಿಡಿದು ಹೀಂಗ್ ಜಗ್ಗಿದ್ರ ?
ನಿನ್ನ ಪ್ರೀತಿಯ ಬಣ್ಣದಲಿ
ಕುಂಚ ಎದ್ದಿ ಚಿತ್ರ ಬರೆದ್ರ
ಪ್ರೇಮವದೋ ಕಂಗಳ ಮತ್ತಲಿ
ಮಧುರ ಗೀತೆ ಗೀಚಿ ನಿಂತಿದೆ
ನೋಡದೋ ಓ… ಮಿತ್ರ….
ಕನಸು ಕಂಗಳ ಚೆಲುವೆ
-ಪ್ರೇಮಾ ನಡುವಿನಮನಿ, ಧಾರವಾಡ
*****