ಅನುದಿನ‌ಕವನ-೫೫೭, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು👇


ಗೆದ್ದೆತ್ತು ಬಾಲ
ಹಿಡಿದವರು; ಗೂಳಿ
ಬಿದ್ದಾಗ ಕಲ್ಲು

ಬುದ್ಧನಾಗಲು
ನಿರ್ಧರಿಸಿದಾಗೊಮ್ಮೆ
ನೀ ಅಡ್ಡ ಬಂದೆ!

ಗುಡ್ಡದೆದುರು
ನಿಂತು ಕೂಗಿದ ಶ್ವಾನ
ಕುಸಿದು ಬಿತ್ತು
೪,
ವಾಸ್ತುದೋಷಕೆ
ಮನೆ ಬಿಟ್ಟರು; ಇಲಿ
ಹೆಗ್ಗಣ ವಾಸ

ವಸಂತಳಿಗೂ
ಸಂತನೆಂದರೆ ಸಾಕು
ಹೂ ಕೊಟ್ಟು ಪ್ರೀತಿ

ಓದಿದಂತೆಲ್ಲ
ಆವರಿಸುವ ನಿನ್ನ
ಕಾವ್ಯದಮಲು

ದೇವಸ್ಥಾನಕೆ
ಹೋದ ಬಹುಮಂದಿಗೆ
ಚಪ್ಪಲಿ ಧ್ಯಾನ

ಉರಿದವರ
ಹೆಣದ ಬೂದಿಯಲೂ
ಹಗೆ ವಾಸನೆ

ಕತ್ತಲನ್ನೇಕೆ
ಜರಿಯುವೆ; ಹಚ್ಚಿಡು
ಪುಟ್ಟ ಹಣತೆ
೧೦
ಮರ ತಬ್ಬಿದ
ಬಹುಗುಣ; ಕಡಿದು
ಬೀಗಿದ ಜನ


– ಸಿದ್ದಲಿಂಗಪ್ಪ ಬೀಳಗಿ, ಹುನಗುಂದ.
*****